ಕ್ರಿಕೆಟ್ ಲೋಕದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಬಾಲಕ ಪ್ರಣವ್ ಧನವಾಡೆ 
ಕ್ರೀಡೆ

323 ಬಾಲ್ ನಲ್ಲಿ 1009 ರನ್; 15ರ ಬಾಲಕನ ಹೊಸ ದಾಖಲೆ

15ರ ಹರೆಯದ ಬಾಲಕನೊಬ್ಬ ಕ್ರಿಕೆಟ್ ಲೋಕದಲ್ಲೊಂದು ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದು, 323 ಚೆಂಡುಗಳಲ್ಲಿ 1009 ರನ್ ಗಳನ್ನು ಗಳಿಸುವ ಮೂಲಕ ಪ್ರಣವ್ ಧನವಾಡೆ ಎಂಬ ಬಾಲಕ...

ಮುಂಬೈ: 15ರ ಹರೆಯದ ಬಾಲಕನೊಬ್ಬ ಕ್ರಿಕೆಟ್ ಲೋಕದಲ್ಲೊಂದು ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದು, 323 ಚೆಂಡುಗಳಲ್ಲಿ 1009 ರನ್ ಗಳನ್ನು ಗಳಿಸುವ ಮೂಲಕ ಪ್ರಣವ್ ಧನವಾಡೆ ಎಂಬ ಬಾಲಕ 116 ವರ್ಷದ ದಾಖಲೆಯನ್ನು ಮುರಿದ್ದಾನೆ.

ಪ್ರಣವ್ ಧನವಾಡೆ ದಾಖಲೆ ಮುರಿದ ವಿದ್ಯಾರ್ಥಿಯಾಗಿದ್ದು, ಈಗ ಕಲ್ಯಾಣ್ ಕೆಸಿ ಗಾಂಧಿ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾನೆ. 16 ವಯೋಮಿತಿಯಲ್ಲಿರುವ ವಿದ್ಯಾರ್ಥಿಗಳಿಗಾಗಿ ಕಲ್ಯಾಣ್ ಯೂನಿಯನ್ ಕ್ರಿಕೆಟ್ ಅಕಾಡೆಮಿ ನಡೆಸಿದ ಅಂತರ್ ಶಾಲಾ ಪಂದ್ಯಾವಳಿಯಲ್ಲಿ ಪ್ರಣವ್ ಕೇವಲ 323 ಎಸೆತಗಳಲ್ಲಿ 129 ಬೌಂಡರ್, 59  ಸಿಕ್ಸರ್ ಬಾರಿಸಿ ಅಜೇಯ 1009 ರನ್ ಗಳಿಸುವ ಮೂಲಕ ಐತಿಹಾಸಿಕ ದಾಖಲೆ ಮಾಡಿದ್ದಾನೆ.

116 ವರ್ಷಗಳ ಹಿಂದೆ 1899ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಟೂರ್ನಿಯೊಂದರ ಪಂದ್ಯದಲ್ಲಿ ನಾರ್ತ್ ಟೌನ್ ಹೌಸ್ ತಂಡದ ವಿರುದ್ಧ, ಕ್ಲಾರ್ಕ್ ಹೌಸ್ ತಂಡದ ಪರ ಆಡಿದ್ದ ಎಇಜೆ ಕೊಲ್ಲಿನ್ಸ್ ಅವರು 628 ರನ್ ಗಳನ್ನು ಗಳಿಸಿದ್ದರು. ಇದೀಗ ಧನವಾಡೆ ಅವರು ಕೊಲ್ಲಿನ್ಸ್ ಅವರ ದಾಖಲೆಯನ್ನು ಮುರಿದು, ಹೊಸ ದಾಖಲೆಯನ್ನು ಬರೆದಿದ್ದಾರೆ.

ದಾಖಲೆ ಸೃಷ್ಟಿಸಿರುವ ಪ್ರಣವ್ ಧನವಾಡೆ ಮುಂಬೈ ನಗರದಲ್ಲಿ ಆಟೋ ಚಾಲಕರೊಬ್ಬರ ಪುತ್ರನಾಗಿದ್ದು, 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

2006ರ KSTP ಯೋಜನೆ ಪ್ರಕರಣ: CEC ಜ್ಞಾನೇಶ್ ಕುಮಾರ್ ವಿರುದ್ಧ ವಿಜಿಲೆನ್ಸ್ ತನಿಖೆಗೆ ಕೇರಳಂ ಗೃಹ ಸಚಿವ ಆದೇಶ

ಭಾರತ- ವೆಸ್ಟ್ ಇಂಡೀಸ್ ನಡುವಿನ ಪಂದ್ಯದ ವೇಳೆ 'One8' ಬ್ರ್ಯಾಂಡ್‌ ಶೂ ತೋರಿಸಿದ ಅಭಿಮಾನಿ! ಕೊಹ್ಲಿ ರಿಯಾಕ್ಷನ್ ಹೇಗಿತ್ತು ಗೊತ್ತಾ? Video

'ಅಮೇಥಿ ಬಿಟ್ಟು ರಾಯ್‌ಬರೇಲಿಯಿಂದ ಸ್ಪರ್ಧಿಸಲು ರಾಹುಲ್ ಗಾಂಧಿ ತೀವ್ರ ಹೆದರಿದ್ದರು: SP ಇಲ್ಲದಿದ್ದರೇ ಕಾಂಗ್ರೆಸ್ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ'

‘ಮಹಿಳೆಯ ದೇಹ ಮನರಂಜನೆಗೆ ಬಳಸುವ ಕಂಟೆಂಟ್ ಅಲ್ಲ’: ಜಾನ್ವಿ ಕಪೂರ್ ಬೆನ್ನಿಗೆ ನಿಂತ ನಟಿ ಖುಷ್ಬೂ ಸುಂದರ್

'ನನ್ನ ಲವರ್ ಜೊತೆನೇ ಹೋಗ್ತೀನಿ'; ಕೋರ್ಟ್ ನಲ್ಲಿ ಮಗಳ ಹೇಳಿಕೆಗೆ ಆಕ್ರೋಶ, ಯುವಕನ ತಂದೆಗೆ ಹಿಗ್ಗಾಮುಗ್ಗ ಜಾಡಿಸಿದ ತಾಯಿ!-Video