ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್(ಸಂಗ್ರಹ ಚಿತ್ರ) 
ಕ್ರೀಡೆ

ಕೇರಳ, ರೇಲ್ವೇಸ್ ಫೈನಲ್‍ ಗೆ

ಕೇರಳ ತಂಡ, ಪಂಜಾಬ್ ವಿರುದ್ಧ 3-2 ಸೆಟ್‍ಗಳ ರೋಚಕ ಗೆಲುವಿನೊಂದಿಗೆ 64 ನೇ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ನ ಫೈನಲ್ ಗೆ ಲಗ್ಗೆ ಹಾಕಿದೆ.

ಬೆಂಗಳೂರು: ತೀವ್ರ ತುರುಸಿನಿಂದ ಕೂಡಿದ್ದ ಪಂದ್ಯದಲ್ಲಿ ಮತ್ತೊಮ್ಮೆ ಛಲದ ಹೋರಾಟ ನಡೆಸಿದ ಕೇರಳ ತಂಡ, ಪಂಜಾಬ್ ವಿರುದ್ಧ 3-2 ಸೆಟ್‍ಗಳ ರೋಚಕ ಗೆಲುವಿನೊಂದಿಗೆ 64 ನೇ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ನ ಫೈನಲ್ ಗೆ ಲಗ್ಗೆ ಹಾಕಿದರೆ , ಮತ್ತೊಂದು ಪಂದ್ಯದಲ್ಲಿ ತಮಿಳುನಾಡಿನ ಸವಾಲನ್ನು 3 -0 ಸೆಟ್ ಗಳಿಂದ ಮೆಟ್ಟಿನಿಂತ ರೈಲ್ವೇಸ್ ಪ್ರಶಸ್ತಿ ಸುತ್ತಿಗೆ ಧಾವಿಸಿತು.

ಇಲ್ಲಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮೊದಲ ಸೆಮಿ ಫೈನಲ್ ಪಂದ್ಯವು ಅತ್ಯಂತ ರೋಚಕ ತಿರುವು ಕಂಡು ಅಂತಿಮವಾಗಿ ಕೇರಳ 19 -25 , 23-25, 28-26, 25-18, 15-13 ರಿಂದ ವಿಜಯದ ಕೇಕೆ ಹಾಕಿತು. 123 ನಿಮಿಷಗಳ ಕಾಲ ನಡೆದ ಸುದೀರ್ಘ ಸೆಣೆಸಾಟದಲ್ಲಿ ಮೊದಲ ಸೆಟ್ ನ್ನು ಕಳೆದುಕೊಂಡರೂ, ಆ ಬಳಿಕ ತಿರುಗಿಬಿದ್ದ ಪರಿಗೆ ಪಂಜಾಬ್ ಆಟಗಾರರು ಮಣಿಯಲೇಬೇಕಾಯಿತು. ಇತ್ತ ಪಶ್ಚಿಮ ಬಂಗಾಳ ವಿರುದ್ಧ ರೈಲ್ವೇಸ್ 3 -0 ಯಿಂದ ಜಯಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಡೆವಿಲ್‌' ಸಿನಿಮಾದ 'ಇದ್ರೆ ನೆಮ್ಮದಿಯಾಗಿ ಇರಬೇಕು' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT