ನವದೆಹಲಿ: ಭಾರತದ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ನೂತನ ಡಬ್ಲ್ಯೂಟಿಎ ಡಬಲ್ಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದರೆ, ಆಕೆಯ ಜತೆಗಾರ್ತಿ ಸ್ವಿಜರ್ಲೆಂಡ್‍ನ ಮಾರ್ಟಿನಾ ಹಿಂಗಿಸ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಸಾನಿಯಾ 11,395 ಅಂಕಗಳನ್ನು ಸಂಪಾದಿಸಿದರೆ, ಹಿಂಗಿಸ್ 11,355 ಅಂಕ ಹೊಂದಿದ್ದಾರೆ. ಇನ್ನು ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ ಮಾತ್ರ ಅಗ್ರ 10ರಲ್ಲಿ ಕಾಣಿಸಿಕೊಂಡಿದ್ದಾರೆ. ಯೂಕಿ ಭಾಂಬ್ರಿ ಪುರುಷರ ಸಿಂಗಲ್ಸ್‍ನಲ್ಲಿ 95ನೇ ಸ್ಥಾನದಲ್ಲಿರುವುದು ಭಾರತದ ಪರ ಶ್ರೇಷ್ಠ ಸಾಧನೆಯಾಗಿದೆ. ಸಾಕೇತ್ ಮೈನೆನಿ 168, ಸೋಮ್ ದೇವ್ 173ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.