ಕೋಝಿಕ್ಕೋಡ್: ಕೇರಳಕ್ಕೆ ಭೇಟಿ ನೀಡಿದ್ದ ಬ್ರೆಜಿಲ್ ನ ಖ್ಯಾತ ಫುಟ್ಬಾಲ್ ತಾರೆ ರೊನಾಲ್ಡಿನೋ ಅಪಘಾತವೊಂದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಕೋಝಿಕ್ಕೋಡ್ ಜಿಲ್ಲೆಯ ನಡಕ್ಕಾವ್ ಹೆಣ್ಣುಮಕ್ಕಳ ಸರ್ಕಾರಿ ಹೈಯರ್‌ಸೆಕೆಂಡರಿ ಶಾಲೆಯಲ್ಲಿನ ಕಾರ್ಯಕ್ರಮ ಮುಗಿಸಿ ಹೊರಡುತ್ತಿದ್ದಂತೆ ಅವರ ಕಾರಿನ ಮುಂದೆಯೇ ಸಿಗ್ನಲ್ ಲೈಟ್ ಕಂಬವೊಂದು ಬಿದ್ದಿದೆ.
ರೊನಾಲ್ಡಿನೋ ಅವರನ್ನು ನೋಡಲು ಸಾವಿರಾರು ಮಂದಿ ಅಲ್ಲಿ ಜಮಾಯಿಸಿದ್ದು, ಈ ವೇಳೆ ಸಿಗ್ನಲ್ ಲೈಟ್ ಕಂಬ ಬಿದ್ದಿದೆ. ಈ ಕಂಬ ಕಾರಿನ ಮುಂದೆ ಬಿದ್ದ ಕಾರಣ ಕೂದಲೆಳೆ ಅಂತರದಲ್ಲಿ ರೊನಾಲ್ಡಿನೋ ಪಾರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಜನರ ನೂಕು ನುಗ್ಗಲಿನಿಂದಾಗಿ ಕೆಟ್ಟು ಹೋಗಿರುವ ಸಿಗ್ನಲ್ ಕಂಬ ಬಿದ್ದಿದೆ, ಇಲ್ಲಿ ಯಾವುದೇ ಭದ್ರತಾಲೋಪ ಸಂಭವಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.