ವಿಶಾಖಪಟ್ಟಣ: ಪಂದ್ಯದ ಆರಂಭದಲ್ಲಿ ನಾಯಕ ಸುರ್ಜೀತ್ ನರ್ವಾಲ್ ಮತ್ತು ಅಮಿತ್ ತೋರಿದ ಆಕರ್ಷಕ ಪ್ರದರ್ಶನದ ನೆರವಿನಿಂದ ಬೆಂಗಳೂರು ಬುಲ್ಸ್ ತಂಡ ಮೂರನೇ ಆವೃತ್ತಿಯ ಪ್ರೊ ಕಬ್ಬಡಿ ಲೀಗ್ ನಲ್ಲಿ ಶುಭಾರಂಭ ಮಾಡಿದೆ.
ಶನಿವಾರ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ 35-29 ಅಂಕಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿತು.
ಬುಲ್ಸ್ ತಂಡದ ಪರ ಅಮಿತ್ ರಾಟಿ 7, ದೀಪಕ್ ಕುಮಾರ್ ದಹಿಯಾ, ಸುರ್ಜಿತ್ ನರ್ವಾಲ್ ಮತ್ತು ಶ್ರೀಕಾಂತ್ ತಲಾ 5 ಅಂಕಗಳನ್ನು ಕಲೆ ಹಾಕಿದರು.
ಪಂದ್ಯದ ಆರಂಭಿಕ ಐದು ನಿಮಿಷದಲ್ಲೇ ಡೆಲ್ಲಿ ದಬಾಂಗ್ ತಂಡವನ್ನು ಆಲೌಟ್ ಮಾಡಿದ ಬೆಂಗಳೂರು ಬುಲ್ಸ್ 11-1ರ ಭರ್ಜರಿ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಯಿತು. ಡೆಲ್ಲಿ ಪರ ಸುರ್ಜಿತ್ 10, ಕಾಶಿಲಿಂಗ 9 ಅಂಕ ಗಳಿಸಿದರು.