ಸಾಂದರ್ಭಿಕ ಚಿತ್ರ 
ಕ್ರೀಡೆ

ರಿಯೋ ಒಲಂಪಿಕ್ಸ್ ನಲ್ಲಿ ಪೋಕೆಮಾನ್ ಗೋ ಇಲ್ಲ; ಕ್ರೀಡಾಪಟುಗಳಿಗೆ ನಿರಾಸೆ

ಡೋಪಿಂಗ್ ಬಿಕ್ಕಟ್ಟು ಮತ್ತು ಸೌಲಭ್ಯಗಳ ಕೊರತೆ ಇವಕ್ಕಿಂತಲೂ ಮೊಬೈಲ್ ಆಪ್ ಆಟ ಪೋಕೆಮಾನ್ ಗೋ ಆಡಲು ಅವಕಾಶ ಇಲ್ಲದೆ ಇರುವುದು ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ

ಲಂಡನ್: ಡೋಪಿಂಗ್ ಬಿಕ್ಕಟ್ಟು ಮತ್ತು ಸೌಲಭ್ಯಗಳ ಕೊರತೆ ಇವಕ್ಕಿಂತಲೂ ಮೊಬೈಲ್ ಆಪ್ ಆಟ ಪೋಕೆಮಾನ್ ಗೋ ಆಡಲು ಅವಕಾಶ ಇಲ್ಲದೆ ಇರುವುದು ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ ನಿರಾಸೆ ತಂದಿದೆ. 
31 ಕಟ್ಟಡಗಳು ಮತ್ತು 3604 ಅಪಾರ್ಟ್ ಮೆಂಟ್ ಗಳಿರುವ ಒಲಂಪಿಕ್ಸ್ ಗ್ರಾಮಕ್ಕೆ ಜುಲೈ 31 ರಂದು ನೂರಾರು ಕ್ರೀಡಾಪಟುಗಳು ತೆರಳಿದ್ದಾರೆ. ಗ್ರಾಮದಲ್ಲಿ ಇದ್ದ ತೊದರೆಗಳನ್ನು ನಿವಾರಿಸಿದ್ದೇವೆ ಎಂದು ರಿಯೋ ವ್ಯವಸ್ಥಾಪಕ ಸಮಿತಿ ಹೇಳಿಕೊಂಡಿದೆ. 
ಆದರೆ ಕ್ರೀಡಾಪಟುಗಳು ಹಿಡಿಯಲು ಪೋಕೆಮಾನ್ ಗಳು ಇಲ್ಲದಿರುವುದರ ಬಗ್ಗೆ ಆರೋಪಿಸುತ್ತಿದ್ದಾರೆ. ಸದ್ಯಕ್ಕೆ ಈ ಮೊಬೈಲ್ ಆಟ ಅಮೆರಿಕಾ, ಜಪಾನ್, ಆಸ್ಟ್ರೇಲಿಯಾ, ಫಿಲಿಪೈನ್ಸ್, ನ್ಯೂಜಿಲ್ಯಾಂಡ್, ಬ್ರಿಟನ್ ಮತ್ತು ಜರ್ಮನಿಯಲ್ಲಿ ಲಭ್ಯವಿದ್ದು ಬ್ರೆಜಿಲ್ ನಲ್ಲಿ ಇನ್ನು ಬಿಡುಗಡೆಯಾಗಬೇಕಿದೆ. 
ಆದುದರಿಂದ್ ಈ ಆಪ್ ಹೊಂದಿರುವ ಕ್ರೀಡಾಪಟುಗಳಿಗೆ ರಿಯೋ ನಗರದ ನಿಜವಾದ ಭೂಪಟ ಲಭ್ಯವಾಗದೆ ಕೇವಲ ಡಿಜಿಟಲ್ ಭೂಪಟ ಮಾತ್ರ ಲಭ್ಯವಿದ್ದು ಪೋಕೆಸ್ಟಾಪ್ ಗಳು ಕಾಣದೆ ಕ್ರೀಡಾಪಟುಗಳಿಗೆ ನಿರಾಸೆಯಾಗಿದೆ. 
ಇದರಿಂದ ಬೇರೆ ಕ್ರೀಡಾಪಟುಗಳನ್ನು ಭೇಟಿ ಮಾಡಲು ಹೆಚ್ಚಿನ ಸಮಯಾವಾಕಾಶ ಸಿಕ್ಕಂತಾಗಿದೆ ಎಂದಿದ್ದಾರೆ ಕೆನಡಾದ ಹಾಕಿ ಆಟಗಾರ ಮ್ಯಾಟಿಕ್ ಸರಮೆಂಟೊ.  ಆದರೆ ಈ ಕ್ರೀಡಾಕೂಟದ ವಿರಾಮದ ವೇಳೆಯಲ್ಲಿ ಪೊಕೆಮಾನ್ ಗೋ ಆಟ ಆಡುವ ಅವಕಾಶ ಇದ್ದಲ್ಲಿ ಉಪಯುಕ್ತವಿತ್ತು ಎಂದಿರುವ ಅವರು "ಕೆಲವು ಬಾರಿ ಪ್ರಮುಖ ವಿಷಯಗಳಿಂದ ಮನಸ್ಸನ್ನು ಹೊರಗಿಟ್ಟು ಆರಾಮವಾಗಿರಬಹುದಿತ್ತು" ಎಂದಿದ್ದಾರೆ.  
ಪೋಕೆಮಾನ್ ಗೋ ಆಟ ಲಭ್ಯವಿರುವ ದೇಶಗಳಲ್ಲಿ ಪೋಕೆಸ್ಟಾಪ್ ಗಳನ್ನು ಗ್ರಾಹಕರನ್ನು ಸೆಳೆಯಲು ಬಳಸಲಾಗುತ್ತಿದೆ. ಹೋಟೆಲ್ ಗಳು, ಬಾರ್ ಗಳು ಇತ್ಯಾದಿ ಸ್ಥಾನಗಳಲ್ಲಿ ಪೋಕೆಸ್ಟಾಪ್ ಗಳಿದ್ದು ವಿರಳ ಪೋಕೆಮಾನ್ ಗಳನ್ನು ಹಿಡಿಯಲು ಜನ ಬರುತ್ತಾರೆ. 
ಇದನ್ನು ಮನಗಂಡಿರುವ ರಿಯೋ ಮೇಯರ್ ಎಡ್ವಾರ್ಡೊ ಪೇಸ್, ಈ ಆಟವನ್ನು ಬ್ರೆಜಿಲ್ ನಲ್ಲಿ ಬಿಡುಗಡೆ ಮಾಡುವಂತೆ ಇದನ್ನು ಅಭಿವೃದ್ಧಿ ಮಾಡಿರುವ ಸಂಸ್ಥೆಗೆ ಮನವಿ ಮಾಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

SCROLL FOR NEXT