ಇಂಡಿಯನ್ ವೆಲ್ಸ್: ಮಹಿಳಾ ಟೆನಿಸ್ ಆಟಗಾರ್ತಿಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಎನ್‌ಪಿ ಪರಿಬಾಸ್ ಓಪನ್ ಟೆನಿಸ್ ಟೂರ್ನಮೆಂಟ್‌ನ ನಿರ್ದೇಶಕ ಹಾಗೂ ಸಿಇಒ ಆಗಿದ್ದ ರೇಮಂಡ್ ಮೂರ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಎರಡು ದಿನಗಳ ಹಿಂದೆ, ತಾನು ಮಹಿಳಾ ಟೆನಿಸ್ ಕ್ರೀಡಾಪಟುವಾಗಿದ್ದರೆ, ದಿನಾ ರಾತ್ರಿ ಮಲಗುವ ಮುನ್ನ ಮೊಣಕಾಲೂರಿ ಕುಳಿತು ದೇವರಿಗೆ ಧನ್ಯವಾದ ಹೇಳುತ್ತಿದ್ದೆ... ರೋಜರ್ ಫೆಡರರ್, ರಾಫೆಲ್ ನಡಾಲ್ ಈ ಭೂಮಿಯಲ್ಲಿ ಜನಿಸಿದ್ದಕ್ಕೆ, ಇವರೆಲ್ಲರೂ ಟೆನಿಸ್‌ನ್ನು ಇಷ್ಟೊಂದು ಖ್ಯಾತಿಯತ್ತ ಕೊಂಡೊಯ್ದದ್ದಕ್ಕೆ ಎಂದು ಮಾಧ್ಯಮದವರಲ್ಲಿ ಮಾತನಾಡುವಾಗ ಹೇಳಿದ್ದು, ವಿವಾದವಾಗಿತ್ತು.
ಮೂರ್ ಅವರ ಈ ಹೇಳಿಕೆಯನ್ನು ವಿಶ್ವ ನಂಬರ್ 1 ಆಟಗಾರ್ತಿ ಸರೇನಾ ವಿಲಿಯಂಸ್, ಮಾರ್ಟಿನಾ ನವ್ರಟಿಲೋವಾ ಮೊದಲಾದವರು ತೀವ್ರವಾಗಿ ಖಂಡಿಸಿದ್ದರು.
ಈ ವಿವಾದ ಹಿನ್ನಲೆಯಲ್ಲಿ ಮೂರ್ ಸೋಮವಾರ ರಾಜಿನಾಮೆ ನೀಡಿ ಹೊರ ನಡೆದಿದ್ದಾರೆ.