ಕ್ರೀಡೆ

ಭಾರತ ಜ್ಞಾನದಲ್ಲಿ 20 ವರ್ಷಗಳಷ್ಟು ಹಿಂದಿದೆ: ಅಮೆರಿಕ ಬಾಸ್ಕೆಟ್ ಬಾಲ್ ಆಟಗಾರ

Vishwanath S
ನವದೆಹಲಿ: ಭಾರತ ಜ್ಞಾನದಲ್ಲಿ 20 ವರ್ಷಗಳಷ್ಟು ಹಿಂದಿದೆ ಎಂದು ಅಮೆರಿಕದ ಬಾಸ್ಕೆಟ್ ಬಾಲ್ ತಾರೆ ಕೆವಿನ್ ಡ್ಯುರಾಂಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
ಭಾರತದಲ್ಲಿ ಇನ್ನು ಬಡತನ, ಗಲೀಜು, ಮೂಲಸೌಕರ್ಯದ ಕೊರತೆ ತುಂಬಿಕೊಂಡಿದೆ ಎಂದು ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿದ್ದ ಕೆವಿನ್ ಡ್ಯುರಾಂಟ್ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. 
ಭಾರತ ಕುರಿತು ನನ್ನ ಕಲ್ಪನೆ ವಿಭಿನ್ನವಾಗಿತ್ತು. ಅರಮನೆ, ರಾಜಮನೆತನ, ಬಂಗಾರವೇ ತುಂಬಿ ಕೊಂಡಿರುತ್ತದೆ ಎಂದು ಭಾವಿಸಿದ್ದೇ. ಆದರೆ ಅಲ್ಲಿಗೆ ಕಾಲಿಟ್ಟಾಗ ಪರಿಸ್ಥಿತಿ ಬಹಳ ಒರಟಾಗಿತ್ತು. ಈ ದೇಶ ಜ್ಞಾನದಲ್ಲಿ 20 ವರ್ಷಗಳಷ್ಟು ಹಿಂದಿದೆ. ಬೀದಿಯಲ್ಲಿ ದನಗಳು, ಮಂಗಗಳು, ಕಚ್ಚೋ ನಾಯಿಗಲು ಓಡುತ್ತಿರುತ್ತವೆ. ರಸ್ತೆ ಬದಿಯಲ್ಲಿ ನೂರಾರು ಜನ ನಡೆದುಕೊಂಡು ಹೋಗುತ್ತಿರುತ್ತಾರೆ ಎಂದು ಹೇಳಿದ್ದಾರೆ. 
ಇನ್ನು ಜಗತ್ ಪ್ರಸಿದ್ಧ ತಾಜ್ ಮಹಲ್ ಇರುವ ಜಾಗ ಸ್ವಚ್ಛವಾಗಿರುತ್ತದೆ. ಬಿಗಿ ಭದ್ರತೆಯಿರುತ್ತದೆ ಎಂದೆಲ್ಲ ಕಲ್ಪಿಸಿದ್ದೆ. ಆದರೆ ಪರಿಸ್ಥಿತಿ ವಿರುದ್ಧವಿತ್ತು. ಆದರೆ ತಾಜ್ ಮಹಲ್ ವೀಕ್ಷಣೆ ಒಂದು ಅದ್ಭುತ ಅನುಭವವಾಗಿತ್ತು ಎಂದು ಹೇಳಿದ್ದಾರೆ.
SCROLL FOR NEXT