ಸಿನ್ಸಿನಾಟಿ ಮಾಸ್ಟರ್ಸ್ನ ಕ್ವಾರ್ಟರ್ಸ್ ಫೈನಲ್ ತಲುಪಿದ ರೋಹನ್ ಬೋಪಣ್ಣಾ-ಇವಾನ್ ಡಾಡಿಗ್ ಜೋಡಿ
ಹೊಸದಿಲ್ಲಿ: ರೋಹನ್ ಬೋಪಣ್ಣ ಮತ್ತು ಕ್ರೊಯೇಷಿಯಾದ ಇವಾನ್ ಡೊಡಿಗ್ ಅವರು ಸಿನ್ಸಿನಾಟಿ ಮಾಸ್ಟರ್ಸ್ ನ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದಾರೆ. ಜುವಾನ್ ಸೆಬಾಸ್ಟಿಯನ್ ಕ್ಯಾಬಲ್ ಮತ್ತು ಫ್ಯಾಬಿಯೊ ಫೊಗ್ನಿನಿ ಅವರನ್ನು ಮಣಿಸಿ ಈ ಮುನ್ನಡೆ ಸಾಧಿಸಿದ್ದಾರೆ.
ಏಳನೇ ಶ್ರೇಯಾಂಕಿತ ಬೋಪಣ್ಣಾ ಮತ್ತು ಡೋಡಿಗ್ ಕಳೆದ ವಾರ ಮಾಂಟ್ರಿಯಲ್ನಲ್ಲಿ ನಡೆದ ರೋಜರ್ಸ್ ಕಪ್ ನಲ್ಲಿ ಅಂತಿಮ ಹಂತವನ್ನು ಪ್ರವೇಶಿಸಿದ್ದರು. ಕೊಲಂಬಿಯಾ-ಇಟಾಲಿಯನ್ ಟೂರ್ನಿಯ ಎರಡನೇ ಸುತ್ತಿನಲ್ಲಿ 5-7, 7-5, 10-8 ಸೆಟ್ ಗಳಿಂದ ಸೋಲನುಭವಿಸಿದರು.
ಇದೇ ಸಮಯದಲ್ಲಿ ಡಬ್ಲ್ಯೂಟಿಎ ಪಂದ್ಯಾವಳಿಯಲ್ಲಿ, ಆಡಿ ಪ್ರಸಿದ್ದವಾಗಿರುವ ಸಾನಿಯಾ ಮಿರ್ಜಾ ಮತ್ತು ಶುಯಿ ಪೆಂಗ್ ಅವರು ಐರಿನಾ-ಕ್ಯಾಮೆಲಿಯಾ ಬೇಗು ಮತ್ತು ರಾಲುಕಾ ಒಲುರು ವಿರುದ್ಧ 6-3, 6-7 (1) 10-3 ಜಯಗಳಿಸಿ ಸೆಮಿಫೈನಲ್ ತಲುಪಿದ್ದಾರೆ.
ಒಂದು ಗಂಟೆ ಮತ್ತು 41 ನಿಮಿಷಗಳ ಕಾಲ ನಡೆದ ತಮ್ಮ ಉತ್ತಮ ಪ್ರದರ್ಶನದಲ್ಲಿ ಬೋಪಣ್ಣಾ ಮತ್ತು ಡೋಡಿಗ್ ಅವರ ಪ್ರತಿಸ್ಪರ್ಧಿಗಳನ್ನುೊಂದು ಸೆಟ್ ನಿಂದ ಮಣಿಸಿದರೆ ಇನ್ನೊಂದು ಸೆಟ್ ನಲ್ಲಿ ತಾವು ಶರಣಾದರು.
ಕ್ಯಾಬಲ್ ಮತ್ತು ಫೊಗ್ನಿನಿ ಅವರ ಸಹ ಕಠಿಣ ಹೋರಾಟವನ್ನು ಕೊಟ್ಟು ಬೋಪಣ್ಣ ಜೋಡಿಗೆ ಸವಾಲಾಗಿದ್ದರು. ಕಡೆಗೂ ಅವರು ಈ ಹೋರಾಟದಲ್ಲಿ ಏಳು ಪಾಯಿಂಟ್ ಗಳನ್ನು ಪಡೆಯಲು ಮಾತ್ರವೇ ಸಾಧ್ಯವಾಯಿತು.
ಬೋಪಣ್ಣಾ ಮತ್ತು ಡೋಡಿಗ್ ಜೋಡಿ ಎರಡನೇ ಶ್ರೇಯಾಂಕಿತರಾದ ಲುಕಾಸ್ ಕುಬೊಟ್ ಮತ್ತು ಮಾರ್ಸೆಲೋ ಮೆಲೊ ಅವರನ್ನು ಎದುರಿಸಿದರು. ಅವರು ಡಿಯಾಗೋ ಶ್ವಾರ್ಟ್ಜ್ಮನ್ ಮತ್ತು ಮಿಸ್ಚಾ ಝವೆರೆವ್ ಅವರನ್ನು 7-5, 6-2 ಸೆಟ್ಗಳಿಂದ ಸೋಲಿಸಿದರು.
ರಾಮ್ ಕುಮಾರ್ ರಾಮನಾಥನ್ ಮತ್ತು ಲಿಯಾಂಡರ್ ಪೇಸ್ ನಿರ್ಗಮನದ ಬಳಿಕ ಈ ಸರಣಿಯಲ್ಲಿ ಸ್ಪರ್ಧೆಗಿಳಿದಿರುವ ಏಕೈಕ ಭಾರತೀಯ ಬೋಪಣ್ನ ಅವರಾಗಿದ್ದಾರೆ.