ವಿಶ್ವ ಹಾಕಿ ಲೀಗ್ ಫೈನಲ್: ಅರ್ಜೆಂಟೀನಾ ವಿರುದ್ಧ ಭಾರತ ಪರಾಭವ 
ಕ್ರೀಡೆ

ವಿಶ್ವ ಹಾಕಿ ಲೀಗ್ ಫೈನಲ್: ಅರ್ಜೆಂಟೀನಾ ವಿರುದ್ಧ ಭಾರತ ಪರಾಭವ

ಒಡಿಶಾದ ನಡೆದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಹಾಕಿ ಲೀಗ್ ಫೈನಲ್ಸ್ ನ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಅರ್ಜೆಂಟೀನಾ ವಿರುದ್ಧ 0-1 ಗೋಲುಗಳ ಅಂತರದಿಂದ .......

ಭುವನೇಶ್ವರ: ಒಡಿಶಾದ ನಡೆದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಹಾಕಿ ಲೀಗ್ ಫೈನಲ್ಸ್ ನ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಅರ್ಜೆಂಟೀನಾ ವಿರುದ್ಧ 0-1 ಗೋಲುಗಳ ಅಂತರದಿಂದ ಸೋಲುಂಡ ಭಾರತ ಸರಣಿಯಿಂದ ಹೊರನಡೆದಿದೆ. ಇದರೊಡನೆ ವಿಶ್ವ ಹಾಕಿ ಲೀಗ್ ಫೈನಲ್‌ನ ಪ್ರಶಸ್ತಿ ಸುತ್ತು ಪ್ರವೇಶಿಸುವ ಆಸೆಗೆ ತಣ್ಣೀರೆರಚಿದಂತಾಗಿದೆ.
ಪಂದ್ಯ ಪ್ರಾರಂಭದಿಂದಲೂ ಹಿಡಿತ ಸಾಧಿಸಿದ ಅರ್ಜೆಂಟೀನಾ ಭಾರತಕ್ಕೆ ಗೋಲು ಗಳಿಸುವ ಯಾವ ಅವಕಾಶವನ್ನೂ ನೀಡಲಿಲ್ಲ. 17 ನೇ ನಿಮಿಷದಲ್ಲಿ ಭಾರತ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಕೈಚೆಲ್ಲುವ ಮೂಲಕ ಎದುರಾಳಿಗಳಿಗೆ ಮುನ್ನಡೆ ಹೊಂದಲು ಅವಕಾಶ ದೊರಕಿತು. ಅರ್ಜೆಂಟೀನಾದ ಗೊನ್ಸಾಲೊ ಪೆಲಟ್‌ ಚಂಡನ್ನು ಗೋಲು ಪೆಟ್ಟಿಗೆಗೆ ತಲುಪಿಸಿ ಅವರ ತಂಡಕ್ಕೆ ನೆರವಾದರು. ಇದಾದ ನಂತರ ಭಾರತದ ತಂದ ಪ್ರಬಲ ಪೈಪೋಟಿ ನಿಡಿದರೂ ಸಹ ಗೋಲು ದಾಖಲಿಸಲು ವಿಫಲವಾಯಿತು.
ಡಿ.10ಕ್ಕೆ ಕಂಚಿನ ಪದಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾ - ಜರ್ಮನಿ ಸೆಮಿ ಫೈನಲ್ಸ್ ನಲ್ಲಿ ಸೋತ ತಂಡದೊಡನೆ ಸೆಣಸಲಿದೆ. ಸರಣಿಯ ಇನ್ನೊಂದು ಪಂದ್ಯದಲ್ಲಿ ನೆದರ್ ಲ್ಯಾಂಡ್, ಇಂಗ್ಲೆಂಡ್ ನ್ನು  1–0 ಗೋಲುಗಳಿಂದ ಪರಾಭವಗೊಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT