ಪ್ರಶಸ್ತಿ ಸ್ವೀಕರಿಸಿದ ಸೈನಾ ನೆಹ್ವಾಲ್(ಫೋಟೋ ಕೃಪೆ-ಸೈನಾರ ಫೇಸ್ ಬುಕ್ ಪೇಜ್)
ಸರವಾಕ್(ಮಲೇಷಿಯಾ): ಅಲ್ಲಿನ ಕಾಲಮಾನ ಅಪರಾಹ್ನ 2 ಗಂಟೆಗೆ ನಡೆದ ಮಲೇಷಿಯಾ ಮಾಸ್ಟರ್ಸ್ ಗ್ರಾಂಡ್ ಪ್ರಿಕ್ಸ್ ಗೋಲ್ಡ್ ಅಂತಿಮ ಪಂದ್ಯದಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಅವರು ಥಾಲ್ಯಾಂಡ್ ನ 18 ವರ್ಷದ ಪೊರ್ನ್ ಪಾವೀ ಚೊಚುವಾಂಗ್ ಅವರನ್ನು 46 ನಿಮಿಷಗಳ ಆಟದಲ್ಲಿ 22-2-, 22-20 ಸೆಟ್ ಗಳಿಂದ ಮಣಿಸಿದರು. ಸೈನಾ ಲಂಡನ್ ಒಲಿಂಪಿಕ್ಸ್ ನ ಕಂಚಿನ ಪದಕ ವಿಜೇತೆ.
ಇದು ಸೈನಾ ನೆಹ್ವಾಲ್ ಅವರ 23ನೇ ಗೆಲುವಿನ ಪಂದ್ಯವಾಗಿದೆ. ಮತ್ತು ಕಳೆದ ವರ್ಷ ನಡೆದ ಆಸ್ಟ್ರೇಲಿಯಾ ಓಪನ್ಸ್ ನಂತರದ ಮೊದಲ ಪಂದ್ಯವಾಗಿದೆ.ವಿಶ್ವದ ನಂ.10 ಶ್ರೇಯಾಂಕಿತೆ 26 ವರ್ಷದ ಸೈನಾ ಕಳೆದ ವರ್ಷ ಮೊಣಕಾಲಿನ ಶಸ್ತ್ರಚಿಕಿತ್ಸೆ ನಂತರ ಮತ್ತೆ ಫಾರ್ಮ್ ಗೆ ಮರಳಲು ಹಾತೊರೆಯುತ್ತಿದ್ದರು.