ಕ್ರೀಡೆ

ಬೆಂಗಳೂರಿನಲ್ಲಿ ಮೊದಲ ಬಾರಿಗೆ 'ಪಡೆಲ್' ಕ್ರೀಡಾ ಸೌಲಭ್ಯ

Prasad SN

- ಇದು ರಾಕೆಟ್ ಸ್ಪೋರ್ಟ್, ಟೆನ್ನಿಸ್ ಮತ್ತು ಸ್ಕ್ವಾಷ್ ಸಮ್ಮಿಶ್ರಣ. ಸದಾ ಡಬಲ್ಸ್ ಆಡುವ ಆಟ.
- ಬೆಂಗಳೂರಿನಲ್ಲಿ ಮೂರು ಮೈದಾನ ಹೊಂದಿದ್ದು, ಬೆಂಗಳೂರು ರಾಷ್ಟ್ರದ ಮೊದಲ ಪಡೆಲ್ ಟೂರ್ನಿಯ ಆತಿಥ್ಯವನ್ನು ಮಾರ್ಚ್ 25, 2017 ರಂದು ವಹಿಸಲಿದೆ.

ಬೆಂಗಳೂರು: ಟೆನ್ನಿಸ್ ಹಾಗೂ ಸ್ಕ್ವಾಷ್‍ನ ಸಮ್ಮಿಶ್ರಣ ಆಗಿರುವ ಪಡೆಲ್ ಕ್ರೀಡೆಯನ್ನು 1 ಮಿಲಿಯನ್‍ಗೂ ಹೆಚ್ಚು ಜನ ಜಗತ್ತಿನಾದ್ಯಂತ ಆಡುತ್ತಿದ್ದಾರೆ. ಈ ಕ್ರೀಡೆಯನ್ನು ಭಾರತದಲ್ಲಿ ಇನ್‍ಪಡೆಲ್ ಎಂದು ಪರಿಚಯಿಸಲಾಗುತ್ತಿದೆ. ನಮ್ಮ ಬೆಂಗಳೂರು ರಾಷ್ಟ್ರದಲ್ಲಿ ಪಡೆಲ್ ಸೌಲಭ್ಯ ಪಡೆದ ನಗರವಾಗಿದೆ.

ಪಡೆಲ್ ಭಾರತದಲ್ಲಿ ಬೆಳೆಯುವುದಕ್ಕೆ ಅಗತ್ಯವಿರುವ ಪ್ರೋತ್ಸಾಹ ನೀಡುತ್ತದೆ. ಇದರಲ್ಲಿ ವಿನ್ಯಾಸ, ನಿರ್ಮಾಣ ಹಾಗೂ ಪಡೆಲ್ ಮೈದಾನ ಅಳವಡಿಕೆ, ಮೈದಾನ ನಿರ್ವಹಣೆ ಸೆರಿದೆ. ಜತೆಗೆ ಪಡೆಲ್ ಉತ್ಸಾಹಿಗಳನ್ನು ಮತ್ತು ಸ್ಪರ್ಧೆ ಹಾಗೂ ಟೂರ್ನಿ ನಡೆಸುವುದಕ್ಕೆ ಅಗತ್ಯವಿರುವ ಅರ್ಹ ತರಬೇತುದಾರರನ್ನೂ ಒದಗಿಸುತ್ತದೆ.

ಪ್ರಮುಖವಾಗಿ, ನೂತನವಾಗಿ ರಚಿಸಿರುವ ಇಂಡಿಯನ್ ಪಡೆಲ್ ಫೆಡರೇಷನ್ ಮೂಲಕ, ಇನ್‍ಪಡೆಲ್ ಮುಂದಿನ ಕೆಲ ವರ್ಷಗಳಲ್ಲಿ ಕ್ರೀಡೆಗೆ ಹೆಚ್ಚು ಜನರನ್ನು ಆಕರ್ಷಿಸುವ ಹಾಗೂ ಅಂತರಾಷ್ಟ್ರೀಯ ಪಡೆಲ್ ಟೂರ್ನಿ ಆಡುವ ಭಾರತೀಯ ತಂಡವನ್ನು ರಚಿಸುವ ಗುರಿಯನ್ನು ಅದು ಹೊಂದಿದೆ.

ಕ್ರೀಡೆಯನ್ನು ಭಾರತಕ್ಕೆ ಪರಿಚಯಿಸಲು ಕಾರಣಕರ್ತರಾಗಿರುವ ಇಬ್ಬರು ಶ್ರೀ ರೊನ್ನಿ ಸೆಹಗಲ್ ಹಾಗೂ ಶ್ರೀ ಭವಿಶ್ ಬಚು. ರೊನ್ನಿ ಮಾಜಿ ರಾಷ್ಟ್ರೀಯ ಮಟ್ಟದ ಟೆನ್ನಿಸ್ ಆಟಗಾರ, ಈಗ ಕ್ರೀಡಾ ಎಂಟರ್‍ಪ್ರನರ್ ಆಗಿದ್ದಾರೆ ಹಾಗೂ ಬುಲ್‍ಡಾಗ್ ಸ್ಪೋಟ್ರ್ಸ್ ಮ್ಯಾನೇಜ್‍ಮೆಂಟ್ ಪ್ರೈ.ಲಿ.ನ ಸಿಇಒ ಪಡೆಲ್ ಭಾರತಕ್ಕೆ ಪರಿಚಯಿಸುತ್ತಿರುವ ಇವರು ಇನ್‍ಪಡೆಲ್‍ನ ಸಂಸ್ಥಾಪಕರೂ ಸಹ.

ಶ್ರೀ ಭವಿಶ್ ಬಚು, ಭಾರತೀಯ ಮೂಲದ ಪೋರ್ಚುಗೀಸ್ ಪ್ರಜೆ, ಪೋರ್ಚುಗಲ್ ಮತ್ತು ಮೊಜಾಂಬಿಕ್‍ನಲ್ಲಿ ವ್ಯಾಪಾರ, ವಹಿವಾಟು ಹೊಂದಿರುವ ಇವರು ಇನ್‍ಪಡೆಲ್ ಸಹ ಸಂಸ್ಥಾಪಕರು ಮತ್ತು ಸಿಇಒ. ಶ್ರೀ ಆಂಡ್ರೆಸ್ ಸ್ಟಮಿಲೆ ಕೆನಡಾದವರು. ಮಾಜಿ ಅಂತರಾಷ್ಟ್ರೀಯ ಆಟಗಾರ ಮತ್ತು ಜೂನಿಯರ್ ಚಾಂಪಿಯನ್, ಪ್ರಸ್ತುತ ಅಂತರಾಷ್ಟ್ರೀಯ ಪಡೆಲ್ ತರಬೇತುದಾರ. ಭಾರತದಲ್ಲಿ ಇನ್‍ಫೆಡಲ್‍ನ ಪ್ರಧಾನ ತರಬೇತುದಾರರಾಗಿ ಕ್ರೀಡೆ ಬೆಳೆಸಲಿದ್ದಾರೆ.

ಪ್ರಾರಂಭಿಕವಾಗಿ ಪಡೆಲ್ ಕ್ರೀಡೆಯನ್ನು ಬೆಂಗಳೂರಿನ ಮೂರು ಸ್ಥಳಗಳಲ್ಲಿ-ಪ್ಲೇ ಅರೆನ್, ಸರ್ಜಾಪುರ ರಸ್ತೆ, ಬುಲ್‍ಡಾಗ್ ಸ್ಪೋಟ್ರ್ಸ್ ಅಂಡ್ ರೆಕ್ರಿಯೇಷನ್ ಸೆಂಟರ್, ಹೆಣ್ಣೂರು ರಸ್ತೆ ಹಾಗೂ ಬುಲ್‍ಹೌಸ್ ಟೆನ್ನಿಸ್ ಅಕಾಡೆಮಿ, ಕನಕಪುರ ರಸ್ತೆ ಪರಿಚಯಿಸುತ್ತಿದೆ.

ನಮ್ಮ ಬೆಂಗಳೂರು ಮಾರ್ಚ್ 25, 2017 (ಶನಿವಾರ) ನಡೆಯಲಿರುವ ರಾಷ್ಟ್ರದ ಮೊದಲ ಪೆಡಲ್ ಟೂರ್ನಿಯ ಆತಿಥ್ಯ ವಹಿಸಿದೆ. 16 ತಂಡಗಳು ಸೆಣಸುತ್ತಿವೆ. ಟೂರ್ನಿ ಪ್ಲೇ ಅರೆನ, ಸರ್ಜಾಪುರ ರಸ್ತೆಯಲ್ಲಿ ನಡೆಯಲಿದೆ.

SCROLL FOR NEXT