ಸೈನಾ ನೆಹ್ವಾಲ್ 
ಕ್ರೀಡೆ

ಹಾಂಗ್ ಕಾಂಗ್ ಓಪನ್: ಸೈನಾ, ಸಿಂಧು ಎರಡನೇ ಸುತ್ತು ಪ್ರವೇಶ

ಹಾಂಗ್ ಕಾಂಗ್ ಓಪನ್ ಸೂಪರ್ ಸೀರಿಸ್ ಬ್ಯಾಏಡ್ಮಿಂಟನ್ ನಲ್ಲಿ ಭಾರತದ ಸೈನಾ ನೆಹ್ವಾಲ್ ಹಾಗೂ ಪಿವಿ ಸಿಂಧು ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಕೌಲೂನ್: ಹಾಂಗ್ ಕಾಂಗ್ ಓಪನ್ ಸೂಪರ್ ಸೀರಿಸ್ ಬ್ಯಾಏಡ್ಮಿಂಟನ್ ನಲ್ಲಿ ಭಾರತದ ಸೈನಾ ನೆಹ್ವಾಲ್ ಹಾಗೂ ಪಿವಿ ಸಿಂಧು ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಸೈನಾ ನೆಹ್ವಾಲ್ ಡೆನ್ಮಾರ್ಕಿನ ಮೆಟ್ಟೆ ಪೌಲ್ಸೆನ್ ಅವರನ್ನು 21-19, 23-21 ಸೆಟ್ ಗಳ ಅಂತರದಲ್ಲಿ ಮಣಿಸಿದರೆ, ಸಿಂಧು ಅವರು ಹಾಂಗ್ ಕಾಂಗ್ ನ ಕ್ವಾಲಿಫೈಯರ್ ಲೆಯುಂಗ್ ಯುಯೆಟ್ ಯೇ ಅವರನ್ನು 21-18, 21-10 ಸೆಟ್ ಗಳಿಂದ ಪರಾಭವಗೊಳಿಸಿದರು.
ಇದೇ ವೇಳೆ ಪುರುಷರ ವಿಭಾಗದಲ್ಲಿ ಭಾರತದ ಪರುಪಳ್ಳಿ ಕಶ್ಯಪ್ ಹಾಗೂ ಸೌರಭ್ ವೆರ್ಮಾ ಮೊದಲ ಸುತ್ತಿನಲ್ಲಿಯೇ ಸೋತು ಸರಣಿಯಿಂದ ಹೊರನಡೆದಿದ್ದಾರೆ. ಪರುಪಳ್ಳಿ ಕಶ್ಯಪ್, ಲೀ ಡಾಂಗ್ ಕ್ಯೂನ್  ಅವರ ವಿರುದ್ಧ 21-15, 9-21, 20-22 ಸೆಟ್ ಗಳ ಅಂತರದಲ್ಲಿ ಪರಾಜಿತರಾದರು. ಇನ್ನು ಇಂಡೋನೇಷ್ಯಾದ ಟೊಮಿ ಸುಗಿಯಾರ್ಟೊ ಅವರಿಗೆ ಶರಣಾದ ಸೌರಭ್ ವೆರ್ಮಾ 15-21, 8-21ರ ಅಂತರದಲ್ಲಿ ಸೋಲೊಪ್ಪಿದರು.
ಭಾರತದ ಪರ ಮಹಿಳಾ ಡಬಲ್ಸ್ ನಲ್ಲಿ ಆಡಿದ್ದ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ ಅವರುಗಳು ಚೀನಾದ ಹುವಾಂಗ್ ಡೋಂಗ್ಬಿಂಗ್ ಮತ್ತು ಲೀ ವೆನ್ಮಿ ಅವರುಗಳ ವಿರುದ್ಧ 11-21, 21-19, 19-21ರ ಅಂತರದಿಂದ ಪರಾಜಿತರಾದರು.
ದ್ವಿತೀಯ ಸುತ್ತಿಗೆ ಪ್ರವೇಶ ಗಿಟ್ಟಿಸಿರುವ ಸೈನಾ ನೆಹ್ವಾಲ್ ಚೆನ್ ಯೂಫಿ ಅವರೊಡನೆ ಮುಂದಿನ ಹೋರಾಟ ನಡೆಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗುಜರಾತ್ ಜನರು ಅನಕ್ಷರಸ್ಥರು.. ಮೋದಿ, ಪಿಣರಾಯಿ ವಿಜಯನ್ ಜನರ ದಾರಿ ತಪ್ಪಿಸಿದ್ದಾರೆ: Mallikarjun Kharge

ಅಂತ್ಯ ಸನ್ನಿಹಿತ?: ಇರಾನ್ ನತ್ತ ಮುಖ ಮಾಡಿದ ಅಮೆರಿಕದ ಅತ್ಯಂತ ವಿಧ್ವಂಸಕ ಕ್ಷಿಪಣಿ

IPL 2026: ಚಿನ್ನಸ್ವಾಮಿಯಲ್ಲಿ ಸಿಕ್ಸರ್​ಗಳ ಮಳೆ; CSK ವಿರುದ್ಧ ದಾಖಲೆಯ 250 ರನ್ ಪೇರಿಸಿದ RCB

IPL 2026: ರೋಹಿತ್ ಶರ್ಮಾ ದಾಖಲೆ ಧೂಳಿಪಟ ಮಾಡಿದ Virat Kohli; ಮತ್ತೆ ನಂಬರ್ 1 ಪಟ್ಟ!

IPL 2026: ಕೊನೆಗೂ ಗೆದ್ರಲ್ಲಪ್ಪಾ..; SRH ವಿರುದ್ಧ LSG ಭರ್ಜರಿ ಜಯ; ಮೈದಾನದಲ್ಲೇ Rishabh Pant ಬಿಗಿದಪ್ಪಿದ Sanjiv Goenka

SCROLL FOR NEXT