ಕ್ರೀಡೆ

ಯುಎಸ್ ಓಪನ್ ಟೆನ್ನಿಸ್: 2 ವರ್ಷಗಳ ನಂತರ ಟೂರ್ನಿ ಗೆದ್ದ ರಾಫೆಲ್ ನಡಾಲ್

Shilpa D
ನ್ಯೂಯಾರ್ಕ್: ಖ್ಯಾತ ಟೆನಿಸ್ ಆಟಗಾರ ರಾಫೆಲ್ ನಡಾಲ್ ಯು.ಎಸ್. ಓಪನ್ ಟೆನಿಸ್ ಟೂರ್ನಿ ಗೆದ್ದು ಐತಿಹಾಸಿಕ ದಾಖಲೆ ಬರೆದಿದ್ದಾರೆ.
ಸ್ಪೇನ್‌ನ ರಾಫೆಲ್‌ ನಡಾಲ್‌ ತಮ್ಮ ವೃತ್ತಿ ಜೀವನದ ಮೂರನೆ ಯುಎಸ್‌ ಓಪನ್‌ ಕಿರೀಟ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ನಿನ್ನೆ ನಡೆದಿದ್ದ ಯುಎಸ್‌ ಓಪನ್‌ ಫೈನಲ್‌ ಪಂದ್ಯದಲ್ಲಿ ಮೊದಲ ಬಾರಿಗೆ ಫೈನಲ್‌ಗೇರಿದ್ದ ದಕ್ಷಿಣ ಆಫ್ರಿಕಾದ ಕೆವಿನ್‌ ಆ್ಯಂಡರ್‌ಸನ್‌ ಅವರನ್ನು 6-3, 6-3, 6-4 ಪಾಯಿಂಟ್‌ಗಳ ಮೂಲಕ ಬಗ್ಗುಬಡಿದು 16ನೇ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಈ ಮೂಲಕ ತಮ್ಮಲ್ಲಿ ಟೆನ್ನಿಸ್‌ ಉತ್ಸಾಹ ಇನ್ನೂ ಕಡಿಮೆಯಾಗಿಲ್ಲ ಎಂಬುದನ್ನು ವಿಶ್ವದ ನಂ 1 ಆಟಗಾರ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. 
ಯುಎಸ್‌ ಓಪನ್‌ ಗೆಲ್ಲುವ ಮೂಲಕ ಅತಿ ಹೆಚ್ಚು ಗ್ರ್ಯಾಂಡ್‌ಸ್ಲಾಮ್‌ (16) ಗೆದ್ದಿರುವ ನಡಾಲ್‌ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು, 19 ಗ್ರಾಂಡ್‌‌‌ ಸ್ಲಾಮ್‌ ಗೆದ್ದಿರುವ ರೋಜರ್‌ ಫೆಡರರ್‌ ಮೊದಲ ಸ್ಥಾನದಲ್ಲಿದ್ದಾರೆ. 
ಕಳೆದ ಎರಡು ವರ್ಷಗಳಿಂದ ರೋಜರ್ ಫೆಡರರ್ ಯಾವುದೇ ಉನ್ನತ ಮಟ್ಟದ ಪಂದ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ, ತಾವು ಫಾರ್ಮ್ ಗೆ ಮರಳಿರುವುದು ಖುಷಿ ತಂದಿದೆ ಎಂದು ಹೇಳಿದ್ದಾರೆ.31 ವರ್ಷದ ರಾಫೆಲ್ ನಾಲ್ ಮಂಡಿ ನೋವು ಹಾಗೂ ಮಣಿಕಟ್ಟು ನೋವಿನಿಂದ ಬಳಲುತ್ತಿದ್ದಾರೆ.
SCROLL FOR NEXT