ಟೋಕಿಯೋ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಬಳಿಕ ಸೈನಾ ನೆಹ್ವಾಲ್ ಸಹ ಜಪಾನ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರ ಬಂದಿದ್ದಾರೆ.
ಟೂರ್ನಿಯ ಸಿಂಗಲ್ಸ್ ವಿಭಾಗದ 2ನೇ ಸುತ್ತಿನಲ್ಲೇ ಸೈನಾ ನೆಹ್ವಾಲ್ ರಿಯೋ ಒಲಿಂಪಿಕ್ ಚಾಂಪಿಯನ್ ಕ್ಯಾರೊಲಿನಾ ಮರಿನ್ ವಿರುದ್ಧ 16-21, 13-21 ನೇರ ಸೆಟ್ ಗಳಿಂದ ಸೋತು ಟೂರ್ನಿಯಿಂದ ಹೊರಬಿದ್ದರು.
ಇನ್ನು ಪಿವಿ ಸಿಂಧು ತಮ್ಮ ಸಾಂಪ್ರದಾಯಿಕ ಎದುರಾಳಿ ವಿಶ್ವ ಚಾಂಪಿಯನ್ ಜಪಾನ್ ನ ನಜೋಮಿ ಒಕುಹಾರಾ ವಿರುದ್ಧ 18-21, 8-21 ನೇರ ಸೆಟ್ ಗಳಿಂದ ಸೋಲು ಕಂಡರು.