ಮಣಿಕಾ ಬಾತ್ರಾ 
ಕ್ರೀಡೆ

ಟೇಬಲ್‌ ಟೆನಿಸ್‌: ಸೆಮಿ ಫೈನಲ್ ಪ್ರವೇಶಿಸಿದ ಭಾರತದ ಮಹಿಳಾ ತಂಡ

21ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಶನಿವಾರ ನಡೆದ ಟೇಬಲ್ ಟೆನಿಸ್ ಸ್ಪರ್ಧೆಯ ಕ್ವಾಟರ್ ಫೈನಲ್ ಪಂದ್ಯದಲ್ಲಿ ....

ಗೋಲ್ಡ್ ಕೋಸ್ಟ್‌: 21ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಶನಿವಾರ ನಡೆದ ಟೇಬಲ್ ಟೆನಿಸ್ ಸ್ಪರ್ಧೆಯ ಕ್ವಾಟರ್ ಫೈನಲ್ ಪಂದ್ಯದಲ್ಲಿ ಭಾರತದ ಮಹಿಳಾ ತಂಡ, ಮಲೇಷ್ಯಾ ವಿರುದ್ಧ 3–0 ಅಂತರದಿಂದ ಗೆಲುವು ಸಾಧಿಸುವ ಮೂಲಕ ಸೆಮಿ ಫೈನಲ್ ಪ್ರವೇಶಿಸಿದೆ.
ಆರಂಭಿಕ ಪಂದ್ಯದಲ್ಲಿ ಭಾರತದ ಮಣಿಕಾ ಬಾತ್ರಾ ಅವರು ಮಲೆಷ್ಯಾದ ಯಿಂಗ್ ಹೊ ವಿರುದ್ಧ 11–9, 11–7 11–7ರಿಂದ ಗೆದ್ದರು. 
ಎರಡನೇ ಪಂದ್ಯದಲ್ಲಿ ಕರೇನ್ ಲ್ಯಾನೆ ವಿರುದ್ಧ ಸಹ ಆಟಗಾರ್ತಿ ಮಧುರಿಕಾ ಪಟ್ಕಾರ್ ಅವರು ಎಡವಿದರೂ ಬಳಿಕ ಚೇತರಿಸಿಕೊಂಡ ಭಾರತ ತಂಡ, ಮುಂದಿನ ಎರಡು ಪಂದ್ಯದಲ್ಲಿ ಕಠಿಣ ಹೋರಾಟ ನಡೆಸಿ ಮಲೇಷ್ಯಾ ವಿರುದ್ಧ 7-11, 11-9, 11-9, 11-3 ಅಂತರದಿಂದ ಗೆಲುವು ಸಾಧಿಸಿತು.
ಮಧುರಿಕಾ ಹಾಗೂ ಮೌಮಾ ದಾಸ್ ಜೋಡಿ ಮಲೇಷ್ಯಾದ ಯಿಂಗ್ ಹೊ ಮತ್ತು ಐ ಜಿನ್ ತೀ ಜೋಡಿಯನ್ನು ಸೋಲಿಸಿ ಭಾರತ ಪಾಳಯದಲ್ಲಿ ಸಂತಸದ ಅಲೆ ಎಬ್ಬಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ