ಪದಕಗೆದ್ದ ಜೀತುರಾಯ್, ಓಂ ಮಿಥರ್ವಾಲ್
ಗೋಲ್ಡ್ ಕೋಸ್ಟ್: ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿನ ಪದಕ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನಕ್ಕೆ ಜಿಗಿದಿದ್ದು, ಇಂದು ಶೂಟಿಂಗ್ ನಲ್ಲಿ ಒಂದು ಚಿನ್ಮ ಮತ್ತು ಒಂದು ಕಂಚಿನ ಪದಕದ ಮೂಲಕ ಭಾರತದ ಪದಕಗಳ ಗಳಿಕೆ 15ಕ್ಕೇರಿದೆ.
ಪುರುಷರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾರತದ ಜೀತುರಾಯ್ ಸ್ವರ್ಣ ಪದಕ ಪಡೆದರೆ ಇದೇ ಸ್ಪರ್ಧೆಯಲ್ಲಿ ಭಾರತದ ಮತ್ತೋರ್ವ ಶೂಟರ್ ಓಂ ಮಿಥರ್ವಾಲ್ ಕಂಚಿನ ಪದಕ ಪಡೆದರು. ಆ ಮೂಲಕ ಭಾರತದ ಪದಕ ಗಳಿಕೆ 15ಕ್ಕೆ ಏರಿಕೆಯಾದಂತಾಗಿದೆ. ಇನ್ನು ಪಟ್ಟಿಯಲ್ಲಿ ಈ ವರೆಗೂ ಭಾರತ ಒಟ್ಟು 8 ಚಿನ್ನ, 3 ಬೆಳ್ಳಿ, 4 ಕಂಚು ಸೇರಿದಂತೆ ಒಟ್ಟು 15 ಪದಕಗಳನ್ನು ತನ್ನ ಖಜಾನೆಗೆ ಇಳಿಸಿಕೊಂಡಿದೆ.
ಇನ್ನು ಪಟ್ಟಿಯಲ್ಲಿ ಆಸ್ಚ್ರೇಲಿಯಾದ ಪಾರಮ್ಯ ಮುಂದುವರೆದಿದ್ದು, ಒಟ್ಟು 31 ಚಿನ್ನ, 26 ಬೆಳ್ಳಿ, 28 ಕಂಚಿನ ಪದಕ ಸೇರಿದಂತೆ ಆಸಿಸ್ ನ ಪದಕ ಗಳಿಕೆ 85ಕ್ಕೆ ಏರಿಕೆಯಾಗಿದೆ. ಆ ಮೂಲಕ ಆಸ್ಟ್ರೇಲಿಯಾ ತಂಡ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದು, 19 ಚಿನ್ನ, 19 ಬೆಳ್ಳಿ, 10 ಕಂಚಿನ ಪದಕ ಪಡೆದಿರುವ ಇಂಗ್ಲೆಂಡ್ ತಂಡ 2ನೇ ಸ್ಥಾನದಲ್ಲಿ ಮುಂದುವರೆದಿದೆ. ಈ ಹಿಂದೆ 7 ಚಿನ್ನದ ಪದಕದೊಂದಿಗೆ ಮೂರನೇ ಸ್ಥಾನದಲ್ಲಿದ್ದ ಕೆನಡಾ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, 6 ಚಿನ್ನ ಗೆದ್ದಿರುವ ಸ್ಕಾಟ್ಲೆಂಡ್ 5ನೇ ಸ್ಥಾನದಲ್ಲಿದೆ.