ಪದಕ ಗೆದ್ದ ಜೀತು ರಾಯ್ ಮತ್ತು ಓಂ ಮಿಥರ್ವಾಲ್
ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 2018ನೇ ಸಾಲಿನ ಕಾಮನ್ ವೆಲ್ತ್ ಕ್ರೀಡಾಕೂಟಗಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಸೋಮವಾರ ಶೂಟಿಂಗ್ ನಲ್ಲಿ ಎರಡು ಪದಕಗಳು ಲಭಿಸಿದೆ.
ಸೋಮವಾರ ನಡೆದ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ದೆಯಲ್ಲಿ ಭಾರತದ ಸ್ಟಾರ್ ಶೂಟರ್ ಜೀತು ರಾಯ್ ಅಗ್ರ ಸ್ಥಾನ ಗಳಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಅಲ್ಲದೆ ದಾಖಲೆ ಅಂಕಗಳಿಸುವ ಮೂಲಕ ಜೀತುರಾಯ್ ಅಗ್ರಸ್ಥಾನ ಗಳಿಸಿದ್ದು, ರಾಯ್ ಫೈನಲ್ ನಲ್ಲಿ ಒಟ್ಟು 235.1 ಅಂಕಗಳಿಸಿ ಚಿನ್ನ ಗೆದಿದ್ದಾರೆ. 233.5 ಅಂಕಗಳಿಸಿದ ಆಸ್ಟ್ರೇಲಿಯಾದ ಕೆರ್ರಿ ಬೆಲ್ ಬೆಳ್ಳಿ ಪದಕ ಪಡೆದರು.
ಕಂಚಿನ ಪದಕ ತಂದ ಓಂ ಮಿಥರ್ವಾಲ್
ಇದೇ ಪಂದ್ಯದಲ್ಲಿ ಭಾರತದ ಮತ್ತೋರ್ವ ಶೂಟರ್ ಓಂ ಮಿಥಾರ್ವಾಲ್ ಅವರು 214.3 ಅಂಕಗಳಿಸುವ ಮೂಲಕ ಭಾರತಕ್ಕೆ ಮತ್ತೊಂದು ಕಂಚಿನ ಪದಕ ತಂದುಕೊಟ್ಟಿದ್ದಾರೆ.