ಕ್ರೀಡೆ

ಕಾಮನ್ವೆಲ್ತ್ ಗೇಮ್ಸ್: ಕುಸ್ತಿಯಲ್ಲಿ ಚಿನ್ನ ಗೆದ್ದ ಸುಶೀಲ್ ಕುಮಾರ್, ರಾಹುಲ್ ಅವಾರೆ

Lingaraj Badiger
ಗೋಲ್ಡ್ ಕೋಸ್ಟ್: 21ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಭಾರತದ ಕುಸ್ತಿಪಟುಗಳು ಭರ್ಜರಿ ಚಿನ್ನದ ಬೇಟೆಯಾಡಿದ್ದು, ರಾಹುಲ್ ಅವಾರೆ ನಂತರ ಸುಶೀಲ್ ಕುಮಾರ್ ಅವರು ಸಹ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಇಂದು ನಡೆದ ಪುರುಷರ 74 ಕೆ.ಜಿ. ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ಸುಶೀಲ್ ಕುಮಾರ್ ಅವರು ಚಿನ್ನದ ಪದಕ ಪಡೆದಿದ್ದಾರೆ. 
ಸುಶೀಲ್ ಕುಮಾರ್ ಅವರು ದಕ್ಷಿಣ ಆಫ್ರಿಕಾದ ಕುಸ್ತಿಪಟು ಜೋಹಾನ್ಸ್ ಬೋತಾ ಅವರನ್ನು ಕೇವಲ ಒಂದು ನಿಮಿಷ 20 ಸೆಕೆಂಡ್ ಗಳಲ್ಲಿ ಮಣಿಸುವ ಮೂಲಕ ಭಾರತಕ್ಕೆ 14ನೇ ಚಿನ್ನಕ್ಕೆ ತಂದು ಕೊಟ್ಟಿದ್ದಾರೆ.
ಇದಕ್ಕು ಮುನ್ನ ಮತ್ತೊಬ್ಬ ಭಾರತದ ಕುಸ್ತಿಪಟು ರಾಹುಲ್ ಅವರು, ಪುರುಷರ 57 ಕೆ.ಜಿ. ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆದಿದ್ದರು.
ಕೆನಡಾದ ಕುಸ್ತಿಪಟು ಸ್ಟೀವನ್ ತಕಾಹಶಿ ವಿರುದ್ಧ ರಾಹುಲ್ 15-7 ಅಂಕಗಳ ಅಂತರದಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. 
ಇನ್ನೂ ಮಹಿಳೆಯರ 57 ಕೆ.ಜಿ ವಿಭಾಗದಲ್ಲಿ ಕಿರಣ್ ಕಂಚಿನ ಪದಕಕ್ಕೆ ಕೊರಳೊಡಿದ್ದಾರೆ. 
53 ಕೆ.ಜಿ. ಮಹಿಳೆಯರ ಕುಸ್ತಿ ವಿಭಾಗದಲ್ಲಿ ಬಬಿತಾ ಕುಮಾರಿ ಬೆಳ್ಳಿ ಪದಕ ಪಡೆದಿದ್ದಾರೆ. 
SCROLL FOR NEXT