ನವದೆಹಲಿ: ಭಾರತದ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ತಾವು ಗರ್ಭಿಣಿಯಾಗಿರುವ ಬಗ್ಗೆ ಸುಳಿವು ನೀಡಿದ್ದಾರೆ.
ಸಾನಿಯಾ ಮಿರ್ಜಾ ಅವರು ಟ್ವೀಟ್ ಮಾಡಿ ಈ ಬಗ್ಗೆ ಸುಳಿವು ನೀಡಿದ್ದಾರೆ. ಟ್ವೀಟರ್ ನಲ್ಲಿ ಫೋಟೋವೊಂದನ್ನು ಪ್ರಕಟಿಸಿರುವ ಸಾನಿಯಾ, ಮಗುವಿನ ಸರ್ ನೇಮ್ ಮಿರ್ಜಾ ಮಲಿಕ್ ಇರಲಿ ಎಂದಿದ್ದಾರೆ.
ಇನ್ನು ಸಾನಿಯಾ ಮಾಡಿರುವ ಫೋಟೋವನ್ನೇ ಪತಿ ಶೋಯೆಬ್ ಮಲಿಕ್ ಸಹ ಟ್ವೀಟ್ ಮಾಡಿದ್ದು ಸಾನಿಯಾ-ಮಲಿಕ್ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವುದಕ್ಕೆ ಪುಷ್ಟಿ ನೀಡಿದೆ.
ಸಾನಿಯಾ ಮಿರ್ಜಾಗೆ ಅಕ್ಟೋಬರ್ ನಲ್ಲಿ ಹೆರಿಗೆಯಾಗುವ ಸಾಧ್ಯತೆ ಇದೆ.