ಸಾನಿಯಾ ಮತ್ತು ಶೊಯೆಬ್ 
ಕ್ರೀಡೆ

ಭಾರತ-ಪಾಕಿಸ್ತಾನ ಒಗ್ಗೂಡಿಸುವ ಉದ್ದೇಶದಿಂದ ಶೊಯೆಬ್ ರನ್ನು ಮದುವೆಯಾಗಿಲ್ಲ: ಸಾನಿಯಾ ಮಿರ್ಜಾ

ಎರಡೂ ರಾಷ್ಟ್ರಗಳನ್ನು ಬೆಸೆಯಲು ನಾವಿಬ್ಬರು ಮದುವೆಯಾಗಿದ್ದೇವೆ ಎಂದು ಹಲವರು ಭಾವಿಸಿದ್ದಾರೆ. ಆದರೆ ನಮ್ಮ ಉದ್ದೇಶ ಹಾಗೆ ಇರಲಿಲ್ಲ ಎಂದು ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹೇಳಿದ್ದಾರೆ.

ನವದೆಹಲಿ: ಎರಡೂ ರಾಷ್ಟ್ರಗಳನ್ನು ಬೆಸೆಯಲು ನಾವಿಬ್ಬರು ಮದುವೆಯಾಗಿದ್ದೇವೆ ಎಂದು ಹಲವರು ಭಾವಿಸಿದ್ದಾರೆ. ಆದರೆ ನಮ್ಮ ಉದ್ದೇಶ ಹಾಗೆ ಇರಲಿಲ್ಲ ಎಂದು ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹೇಳಿದ್ದಾರೆ.
ಪಾಕಿಸ್ತಾನದ ಕ್ರಿಕೆಟಿಗ ಶೊಯೆಬ್ ಮಲ್ಲಿಕ್ ರನ್ನು ವಿವಾಹವಾಗಿ ಪಾಕಿಸ್ತಾನದ ಸೊಸೆಯಾಗಿರುವ ಸಾನಿಯಾ ಇದೀಗ 7 ತಿಂಗಳ ಗರ್ಭಿಣಿ. ಈ ಹಿನ್ನಲೆಯಲ್ಲಿ ಖಾಸಗಿ ನಿಯತಕಾಲಿಕೆಯೊಂದು ಸಾನಿಯಾ ಮಿರ್ಜಾರನ್ನು ಸಂದರ್ಶನ ಮಾಡಿದ್ದು, ಈ ಸಂದರ್ಶನದಲ್ಲಿ ಸಾನಿಯಾ ಮನಬಿಚ್ಚಿ ಮಾತನಾಡಿದ್ದಾರೆ.
'ಅವರಿಬ್ಬರೂ ಭಾರತ ಮತ್ತು ಪಾಕಿಸ್ತಾನವನ್ನು ಭಾವನಾತ್ಮಕವಾಗಿ ಬೆಸೆಯಲು ಮಧುವೆಯಾಗಿದ್ದಾರೆ ಎಂಬ ಭಾವನೆ ವಿವಾಹದ ಸಂದರ್ಭದಲ್ಲಿ ಮತ್ತು ನಂತರದಲ್ಲಿ ಸಾಕಷ್ಟು ಚರ್ಚೆಯಾಗಿತ್ತು.  ಭಾರತ ಮತ್ತು ಪಾಕಿಸ್ತಾನದಲ್ಲಿ ಹಲವರು ಹೀಗೆ ಭಾವಿಸಿಕೊಂಡಿದ್ದಾರೆ… ಏನೆಂದರೆ, ಎರಡೂ ರಾಷ್ಟ್ರಗಳನ್ನು ಬೆಸೆಯಲು ನಾವಿಬ್ಬರು (ಸಾನಿಯಾ ಮಿರ್ಜಾ – ಶೋಯೆಬ್​ ಮಲೀಕ್​) ಮದುವೆಯಾದೆವು ಎಂದು. ಆದರೆ, ನಮ್ಮ ಉದ್ದೇಶವೇನೂ ಹಾಗೆ ಇರಲಿಲ್ಲ.  ನಾನು ಪಾಕಿಸ್ತಾನಕ್ಕೆ ಭೇಟಿ ನೀಡಿದಾಗಲೆಲ್ಲ ಅಲ್ಲಿನ ಜನ ನನ್ನನ್ನು ಪ್ರೀತಿಯಿಂದ ಕಾಣುತ್ತಿದ್ದರು. ಆ ಪ್ರೀತಿ ನನಗೆ ಅಪಾರವಾಗಿ ಹಿಡಿಸಿತ್ತು. ಅಲ್ಲಿನ ಜನ ನನ್ನನ್ನು ಬಾಬಿ (ಅತ್ತಿಗೆ) ಎಂದು ಕರೆಯುತ್ತಾರೆ. ಅಲ್ಲದೆ, ಬಹುವಾಗಿ ಗೌರವಿಸುತ್ತಾರೆ. ಆ ಪ್ರೀತಿ ನೇರವಾಗಿ ನನಗೆ ಸಿಗುತ್ತಿರುವುದಲ್ಲ. ಬದಲಿಗೆ ನನ್ನ ಪತಿ, ಕ್ರಿಕೆಟರ್​ ಶೋಯಬ್​ ಮಲ್ಲೀಕ್​ ಅವರ ಮೇಲಿನ ಗೌರವದಿಂದ ನನಗೆ ಆ ಮಟ್ಟಿಗಿನ ಪ್ರೀತಿ ಸಿಗುತ್ತಿತ್ತು. ಹಾಗೆಯೇ ಶೋಯಬ್​ ಭಾರತಕ್ಕೆ ಬಂದಾಗ ಅವರಿಗೂ ಇಲ್ಲಿ ಪ್ರೀತಿ, ಗೌರವ ಸಿಗುತ್ತಿತ್ತು ಎಂದು ಸಾನಿಯಾ ಹೇಳಿಕೊಂಡಿದ್ದಾರೆ.
ಭಾರತದ ಟೆನಿಸ್​ ತಾರೆ ಸಾನಿಯಾ ಮತ್ತು ಪಾಕಿಸ್ತಾನದ ಕ್ರಿಕೆಟರ್​ ಶೋಯಬ್​ ಮಲೀಕ್​ ಅವರ ಮಗು ಭಾರತ ಮತ್ತು ಪಾಕಿಸ್ತಾನದ ಪ್ರೇಮದ ಕೂಸು ಎಂದು ಜನ ಕರೆಯುವ ಬಗ್ಗೆ ಏನೆನ್ನುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿರುವ ಸಾನಿಯಾ, ಅಂತ ಉಲ್ಲೇಖಗಳ ಬಗ್ಗೆ ನಾವು ಹೆಚ್ಚು ಚರ್ಚೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಅಂತೆಯೇ ನೀವೂ ಮತ್ತು ಶೊಯೆಬ್ ಕ್ರೀಡಾಕಾರರಾಗಿದ್ದು, ನಿಮ್ಮ ಮಗ ಯಾವ ಕ್ರೀಡೆಯಾಡಲು ಇಚ್ಚಿಸುತ್ತಿರಿ ಎಂಬ ಪ್ರಶ್ನೆಗೆ ಉತ್ತರಿಸಿರುವ ಸಾನಿಯಾ ಅಚ್ಚರಿ ಉತ್ತರ ನೀಡಿದ್ದು, ಟೆನಿಲ್ ಮತ್ತು ಕ್ರಿಕೆಟ್ ಎರಡೂ ಅಲ್ಲ. ನನ್ನ ಮಗುವನ್ನು ನಾನು ವೈದ್ಯನನ್ನಾಗಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಹೆಣ್ಣು ಅಥವಾ ಗಂಡು ಮಗುವಿನ ಕುರಿತ ಪ್ರಶ್ನೆಗೆ ಉತ್ತರಿಸಿದ ಸಾನಿಯಾ ಅಂತಹ ಪ್ರಶ್ನೆಯೇ ಇಲ್ಲ. ಶೊಯೆಬ್ ಯಾವಾಗಲೂ ಹೆಣ್ಣಾಗಬೇಕು ಎಂದು ಆಶಿಸುತ್ತಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT