ಜಕಾರ್ತಾ: ಏಷ್ಯನ್ ಗೇಮ್ಸ್ ಹದಿನೆಂಟನೇ ಆವೃತ್ತಿಯ ಒಂಭತ್ತೇ ದಿನ ಭಾರತಕ್ಕೆ ಮತ್ತೊಂದು ರಜತ ಪದಕ ಒಲಿದಿದೆ.
ಧರುಣ್ ಅಯ್ಯಸಾಮಿಗೆ 400 ಮೀ. ಹರ್ಡಲ್ಸ್ ನಲ್ಲಿ ಬೆಳ್ಳಿ ಪದಕ ಲಭಿಸಿದೆ.ಪುರುಷರ 400 ಮೀ. ಹರ್ಡಲ್ಸ್ ಸ್ಪರ್ಧೆಯಲ್ಲಿ ಅವರು ಬೆಳ್ಳಿ ಪದಕ ಗಳಿಸಿಕೊಂಡಿದ್ದಾರೆ.
ಧರುಣ್ ವೈಯಕ್ತಿಕ ಶ್ರೇಷ್ಠ 48.96 ಅಂಕ ಗಳಿಸಿ ಈ ಸಾಧನೆ ಮಾಡಿದ್ದಾರೆ.
ಧರುಣ್ ರಜತ ಪದಕದೊಡನೆ ಬಾರತ ಪ್ರಸಕ್ತ ಸಾಲಿನಲ್ಲಿ 7 ಚಿನ್ನ, 11 ಬೆಳ್ಳಿ ಮತ್ತು 20 ಕಂಚು ಸೇರಿ 38 ಪದಕಗಳನ್ನು ಗಳಿಸಿದೆ.
ಸುಧಾ ಸಿಂಗ್ ಗೆ ಬೆಳ್ಳಿ
ಭಾರತದ ಮಹಿಳಾ ಅಥ್ಲೀಟ್ ಸುಧಾ ಸಿಂಗ್ 3000 ಮೀಟರ್ ಸ್ಟೀಪಲ್ ಚೇಸ್‌ನಲ್ಲಿ ಬೆಳ್ಳಿ ಪದಕ ಕೊರಳಿಗೆ ಹಾಕಿಕೊಂಡಿದ್ದಾರೆ.
ಬಹರೈನ್ ನ ಯಾವಿ ವಿನ್ಫ್ರೆಡ್ ಅವರನ್ನು ಹಿಂದಿಕಲು ವಿಫಲವಾದ ಸುಧಾ ದ್ವಿತೀಯ ಸ್ಥಾನಿಯಾಗಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರು.
32ನೇ ವರ್ಷದ ಸುಧಾಗೆ ಇದು ಎರಡನೇ ಏಷ್ಯಾಡ್ ಪದಕವಾಗಿದೆ. ಎಂಟು ವರ್ಷಗಳ ಹಿಂದೆ ಗುವಾಂಗ್ಝೌ ನಲ್ಲಿ ಸಹ ಸುಧಾ ಪದಕ ಗಳಿಸಿಕೊಂಡಿದ್ದರು.