ಕ್ರೀಡೆ

ಏಷ್ಯನ್ ಗೇಮ್ಸ್ 2018: ಚಿನ್ನದ ಪದಕದ ಗೆಲುವು ವಾಜಪೇಯಿ ಅವರಿಗೆ ಅರ್ಪಣೆ-ನೀರಜ್ ಚೋಪ್ರಾ

Srinivasamurthy VN
ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018ರ ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನಗೆದ್ದು ಐತಿಹಾಸಿಕ ಸಾಧನೆ ಮಾಡಿದ ಭಾರತದ ಆಟಗಾರ ನೀರಜ್ ಛೋಪ್ರಾ ತಮ್ಮ ಗೆಲುವನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಮರ್ಪಣೆ ಮಾಡಿದ್ದಾರೆ.
ಏಷ್ಯನ್ ಗೇಮ್ಸ್ ನ ಪುರುಷರ ವಿಭಾಗದ ಜಾವೆಲಿನ್ ಥ್ರೊದಲ್ಲಿ ಭಾರತದ ನೀರಜ್ ಚೋಪ್ರ ಐತಿಹಾಸಿಕ ಚಿನ್ನದ ಪದಕ ಗಳಿಸಿದ್ದರು. ಆ ಮೂಲಕ ನೀರಜ್ ಚೋಪ್ರಾ ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಜಾವೆಲಿನ್ ಥ್ರೋ ನಲ್ಲಿ ಭಾರತದ ಪರ ಚಿನ್ನದ ಪದಕ ಗೆದ್ದ ಮೊದಲ ಆಟಗಾರ ಕೀರ್ತಿಗೆ ಭಾಜನರಾದರು. 
ಪಂದ್ಯದ ಬಳಿಕ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ನೀರಜ್ ಚೋಪ್ರಾ, ನನ್ನ ಪ್ರದರ್ಶನದಿಂದ ನನಗೆ ನಿಜಕ್ಕೂ ಖುಷಿಯಿದೆ. ಸಾಕಷ್ಟು ತರಬೇತಿ ಮತ್ತು ಸಾಕಷ್ಟು ಕಷ್ಟ ಪಟ್ಟಿದ್ದೆ. ನನ್ನ ಶ್ರಮಕ್ಕೆ ಫಲ ಸಿಕ್ಕಿದ್ದು, ನನ್ನ ಈ ಗೆಲುವನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅರ್ಪಿಸುತ್ತೇನೆ. ಅವರು ಮಹಾನ್ ವ್ಯಕ್ತಿ ಎಂದು ನೀರಜ್ ಚೋಪ್ರಾ ಹೇಳಿದ್ದಾರೆ.
ಇನ್ನು ಇಂದು ನಡೆದ ಜಾವೆಲಿನ್ ಥ್ರೋ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ, ಮೊದಲ ಎಸೆತದಲ್ಲಿ  83.46 ಅಂಕ ಗಳಿಸಿದ್ದ ಚೋಪ್ರಾ ಮೂರನೇ ಎಸೆತದಲ್ಲಿ 88.06 ಅಂಕದೊಂದಿಗೆ  ಚಿನ್ನಕ್ಕೆ ಗುರಿ ಇಟ್ಟರು. ಚೀನಾದ ಕಿಝೆನ್ ಲಿಯು 82.22 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರೆ ಪಾಕಿಸ್ತಾನದ ಅರ್ಷದ್ ನದೀಮ್ ಕಂಚಿನ ಪದಕ ಗಳಿಸಿಕೊಂಡಿದ್ದಾರೆ.
SCROLL FOR NEXT