ಜಕಾರ್ತಾ: ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018ರ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ಜಿನ್ಸನ್ ಜಾನ್ಸನ್ ಅವರು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಏಷ್ಯನ್ ಗೇಮ್ಸ್ 2018ರಲ್ಲಿ ಭಾರತಕ್ಕೆ ಸಿಕ್ಕ 12ನೇ ಚಿನ್ನದ ಪದಕ ಇದಾಗಿದ್ದು, 12ನೇ ದಿನವಾದ ಇಂದು ಪುರುಷರ 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಜಿನ್ಸನ್ ಜಾನ್ಸನ್ ಚಿನ್ನದ ಪದಕ ಗೆದ್ದಿದ್ದಾರೆ.
ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಮನ್‌ಜೀತ್ ಸಿಂಗ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡುವ ಮೂಲಕ ಪದಕ ಕಳೆದುಕೊಂಡರು.
ಇದು ಏಷ್ಯಾಡ್‌ನಲ್ಲಿ ಜಿನ್ಸನ್ ಜಾನ್ಸನ್ ಗೆಲ್ಲುತ್ತಿರುವ ಎರಡನೇ ಪದಕವಾಗಿದೆ. ಈ ಮೊದಲು ಪುರುಷರ 800 ಮೀ. ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಸಾಧನೆ ಮಾಡಿದ್ದರು. ಕುತೂಹಲಕಾರಿ ಅಂಶವೆಂದರೆ ಈ ವಿಭಾಗದಲ್ಲಿ ಮನ್‌ಜೀತ್ ಸಿಂಗ್ ಸ್ವರ್ಣ ಮಾಲೆ ಕೊರಳಿಗೆ ಹಾಕಿಕೊಂಡಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos