ಭಾರತ ಹಾಕಿ ತಂಡ 
ಕ್ರೀಡೆ

ಪುರುಷರ ಹಾಕಿ ವಿಶ್ವಕಪ್ : ಭಾರತದ ಕನಸು ಭಗ್ನ, ನೆದರ್ ಲ್ಯಾಂಡ್ ಸೆಮಿಫೈನಲ್ ಪ್ರವೇಶ

2018 ಪುರುಷರ ಹಾಕಿ ವಿಶ್ವಕಪ್ ಗೆಲ್ಲುವ ಭಾರತದ ಕನಸು ನುಚ್ಚು ನೂರಾಗಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೆದರ್ ಲ್ಯಾಂಡ್ ವಿರುದ್ಧ ಭಾರತ 2-1 ಅಂತರದಿಂದ ಸೋಲನುಭವಿಸಿದೆ.

ಭುವನೇಶ್ವರ: 2018 ಪುರುಷರ ಹಾಕಿ ವಿಶ್ವಕಪ್ ಗೆಲ್ಲುವ ಭಾರತದ ಕನಸು ನುಚ್ಚು ನೂರಾಗಿದೆ. ಕಳಿಂಗ ಅಂತಾರಾಷ್ಟ್ರೀಯ ಹಾಕಿ ಸ್ಟೇಡಿಯಂನಲ್ಲಿ ನಡೆದ ಪುರುಷರ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೆದರ್ ಲ್ಯಾಂಡ್ ವಿರುದ್ಧ ಭಾರತ 2-1 ಅಂತರದಿಂದ ಸೋಲನುಭವಿಸಿದೆ.
ಪಂದ್ಯ ಆರಂಭಗೊಂಡ 12ನೇ ನಿಮಿಷದಲ್ಲಿ ಭಾರತ ಗೋಲ್ ಖಾತೆ ತೆರೆಯಿತು. ಭಾರತದ ಪರವಾಗಿ ಆಕಾಶ್ ದೀಪ್ ಸಿಂಗ್   ಗೋಲ್ ಬಾರಿಸಿ ತಂಡಕ್ಕೆ 1-0 ಅಂತರದಲ್ಲಿ ಮುನ್ನಡೆ ತಂದುಕೊಟ್ಟರು. ಮೊದಲ ಕ್ವಾರ್ಟರ್ ಇನ್ನೇನು ಮುಕ್ತಾಯವಾಗಲಿದೆ ಅನ್ನುವಾಗ ನೆದರ್ ಲ್ಯಾಂಡ್  1-1  ಅಂಕಕ್ಕೆ ಸರಿದೂಗಿಸಿಕೊಂಡರು.
ನೆದರ್ ಲ್ಯಾಂಡ್ ಪರ ಥಿಯೆರಿ ಬ್ರಿಂಕ್ಮನ್ 15 ನೇ ನಿಮಿಷದಲ್ಲಿ ಗೋಲ್ ಬಾರಿಸಿ ಭಾರತಕ್ಕೆ ಎದುರೇಟು ನೀಡಿದರು. ದ್ವಿತೀಯ ಕ್ವಾರ್ಟರ್ ನಲ್ಲಿ ಎರಡೂ ತಂಡಗಳು ಗೋಲ್ ಗಾಗಿ ಹೋರಾಟ ನಡೆಸಿತಾದರೂ ಗೋಲ್ ಸಿಡಿಯಲಿಲ್ಲ. ಆದರೆ, ಅಂತಿಮ ಕ್ವಾರ್ಟರ್ ನಲ್ಲಿ  ನೆದರ್ ಲ್ಯಾಂಡ್ ಪರ 50 ನೇ ನಿಮಿಷದಲ್ಲಿ ಗೋಲ್ ಬಾರಿಸಿ 2-1 ಅಂತರದಿಂದ ತಂಡಕ್ಕೆ ಮುನ್ನಡೆ ಕೊಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!