ಸೈನಾ ಕಶ್ಯಪ್ ಮದುವೆ ಹಾಗೂ ಇಶಾ ಅಂಬಾನಿ ಮದುವೆಯಲ್ಲಿ ಸೈನಾ 
ಕ್ರೀಡೆ

ತಮ್ಮ ಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಂತೆ ಇಶಾ ಅಂಬಾನಿ ಮದುವೆಗೆ ಹಾಜರಾಗಿದ್ದ ಸೈನಾ!

ತಮ್ಮ ಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಂತೆ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ತಮ್ಮ ಸ್ನೇಹಿತೆಯೊಬ್ಬರ ಮದುವೆಗೆ ಹಾಜರಾಗಿದ್ದ ಅಚ್ಚರಿ ವಿಚಾರ ಬೆಳಕಿಗೆ ಬಂದಿದೆ.

ಮುಂಬೈ: ತಮ್ಮ ಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಂತೆ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ತಮ್ಮ ಸ್ನೇಹಿತೆಯೊಬ್ಬರ ಮದುವೆಗೆ ಹಾಜರಾಗಿದ್ದ ಅಚ್ಚರಿ ವಿಚಾರ ಬೆಳಕಿಗೆ ಬಂದಿದೆ.
ಮದುವೆಯ ದಿನವೇ ಹಲವರು ಪರೀಕ್ಷೆಗೆ ಹಾಜರಾಗಿರೋದನ್ನ, ಮತ ಚಲಾಯಿಸಿದ ಘಟನೆಗಳು ಸಾಮಾನ್ಯ. ಅಂತೆಯೇ ಮದುವೆ ಮುಗಿಸಿಕೊಂಡು ಪರೀಕ್ಷೆಗೆ ಹೋದವರ ಬಗ್ಗೆಯೂ ಉದಾಹರಣೆಗಳಿವೆ. ಆದರೆ ತಮ್ಮದೇ ಮದುವೆಯ ದಿನ ಮತ್ತೊಬ್ಬರ ಮದುವೆಗೆ ತೆರಳಿದ್ದನ್ನು ನೀವು ಕೇಳಿದ್ದೀರಾ..?
ಇಂತಹ ಘಟನೆಗೆ ಸಾಕ್ಷಿಯಾಗಿದ್ದು ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್. ಹೌದು.. ನಿನ್ನೆ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತೋರ್ವ ಬ್ಯಾಡ್ಮಿಂಟನ್ ಆಟಗಾರ ಪರುಪಳ್ಳಿ ಕಶ್ಯಪ್ ರನ್ನ ದಿಢೀರ್ ಅಂತ ಮದುವೆಯಾಗಿ ಫ್ಯಾನ್ಸ್​​ಗೆ ಸರ್ ಪ್ರೈಸ್ ಕೊಟ್ಟಿದ್ದರು. ಆದರೆ ಸೈನಾ ತಮ್ಮ ಮದುವೆಗೆ ಕೆಲವೇ ಗಂಟೆಗಳು  ಬಾಕಿ ಇರುವಂತೆ ಉದ್ಯಮಿ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಹಾಗೂ ಉದ್ಯಮಿ ಆನಂದ್ ಪಿರಮಲ್ ಅವರ ಮದುವೆ ಆರತಕ್ಷತೆಯಲ್ಲಿ ಭಾಗಿಯಾಗಿದ್ದರು. 
ಗುರುವಾರ ಮುಂಬೈನ ಜಿಯೋ ಗಾರ್ಡ್‌ನಲ್ಲಿ ನಡೆದ ಇಶಾ ಅಂಬಾನಿ ಹಾಗೂ ಆನಂದ್‌ ಪಿರಮಲ್​ರ ರಿಸೆಪ್ಶನ್​ಗೆ ಸೈನಾ ಹಾಜರಾಗಿದ್ದರು.. ಇದಾದ ಬಳಿಕ ಶುಕ್ರವಾರ ಬೆಳಗ್ಗೆ ಕಶ್ಯಪ್ ರನ್ನು ಹೈದರಾಬಾದ್‌ನಲ್ಲಿ ಸೈನಾ ಕೋರ್ಟ್ ಮ್ಯಾರೇಜ್‌ ಆಗಿದ್ದಾರೆ. ಡಿಸೆಂಬರ್ 16ರಂದು ಹೈದ್ರಾಬಾದ್‌ನಲ್ಲಿ ಸೈನಾ, ಕಶ್ಯಪ್ ರ ಆರತಕ್ಷತೆ ಅದ್ಧೂರಿಯಾಗಿ ನೆರವೇರಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!