ಗಿರೀಶ್ ಆರ್ ಗೌಡ 
ಕ್ರೀಡೆ

ಮಾರಕ ಕ್ಯಾನ್ಸರ್ ಜಯಿಸಿ ರಾಷ್ಟ್ರೀಯ ಚಾಂಪಿಯನ್ ಆದ ಕನ್ನಡಿಗ ಗಿರೀಶ್ ಗೌಡ

ಅವರು ಬಾಕ್ಸರ್, ಆದರೆ ಅವರ ಹೋರಾಟ ಎಲ್ಲ ಬಾಕ್ಸರ್ ಗಳಂತೆ ರಿಂಗ್ ನೊಳಗಿರಲಿಲ್ಲ ಬದಲಾಗಿ ಮಾರಕ ಕ್ಯಾನ್ಸರ್ ರೋಗದೊಡನೆ ಇತ್ತು. ಒಂ

ಬೆಂಗಳೂರು: ಅವರು ಬಾಕ್ಸರ್, ಆದರೆ ಅವರ ಹೋರಾಟ ಎಲ್ಲ ಬಾಕ್ಸರ್ ಗಳಂತೆ ರಿಂಗ್ ನೊಳಗಿರಲಿಲ್ಲ ಬದಲಾಗಿ ಮಾರಕ ಕ್ಯಾನ್ಸರ್ ರೋಗದೊಡನೆ ಇತ್ತು. ಒಂಬತ್ತು ತಿಂಗಳ ಕಾಲ ರಕ್ತ ಕ್ಯಾನ್ಸರ್ ನೊಡನೆ ಹೋರಾಡಿ ಗೆದ್ದ  ಕನ್ನಡಿಗ ಗಿರೀಶ್ ಆರ್ ಗೌಡ (31) ನವದೆಹಲಿಯಲ್ಲಿ ನಡೆದ ನ್ಯಾಷನಲ್ ಫೆಡರೇಶನ್ ಕಪ್ 2017-18ರಲ್ಲಿ 81ಕೆ.ಜಿವಿಭಾಗದಲ್ಲಿಚಿನ್ನದ ಪದಕ  ವಿಜೇತರಾಗಿದ್ದಾರೆ.
ರಕ್ತದ ಕ್ಯಾನ್ಸರ್ ಇದೆ ಎನ್ನುವುದನ್ನು ತಿಳಿದ ಮೇಲೆಯೂ ಆತ್ಮವಿಶ್ವಾಸ ಕಳೆದುಕೊಲ್ಳದೆ ಛಲದಿಂದ ಹೋರಾಡಿ ಗೆದ್ದ ಗಿರೀಶ್ ಎಕ್ಸ್ ಪ್ರೆಸ್ ನೊಡನೆ ಮಾತನಾಡಿದರು.  "ಇದು ನನ್ನ ಮರುಜನ್ಮ ಎನ್ನಬೇಕು, ಕಳೆದ ಒಂಬತ್ತು ತಿಂಗಳಲ್ಲಿ ಕ್ಯಾನ್ಸರ್ ಜತೆ ಹೋರಾಡಿದೆ, ಅದನ್ನು ನನ್ನ ಮೊದಲ ಹೋರಾಟ ಎಂದು ನಾನು ಭಾವಿಸುತ್ತೇನೆ. ರಾಷ್ಟ್ರೀಯ ಮಟ್ಟದಲ್ಲಿ ಇದು ನನ್ನ 9 ನೇ ಚಿನ್ನದ ಪದಕವಾಗಿದೆ ಆದರೆ ಕಳೆದ ವರ್ಷ ನಾನು ಅನುಭವಿಸಿದ ನೋವು, ನಿರಾಶೆ, ಕ್ಯಾನ್ಸರ್ ಆಘಾತದಿಂದ ಇದೀಗ ಮುಕ್ತನಾಗಿದ್ದೇನೆ.
ಗಿರೀಶ್ ಕಳೆದ ಮಾರ್ಚ್ ನಲ್ಲಿ ರಕ್ತ ಕ್ಯಾನ್ಸರ್ ನೊಡನೆ ತೀವ್ರ ಹೋರಾಟ ನಡೆಸಿದ್ದರು. ಗಿರೀಶ್ ಒಬ್ಬ ಹುಟ್ಟು ಹೋರಾಟಗಾರ, ಇಷ್ಟಾಗಿಯೂ ಗಿರೀಶ್ ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ತೀವ್ರ ತರದ ಅಡ್ಡಪರಿಣಾಮಗಳನ್ನು ಎದುರಿಸಬೇಕಾಯಿತು.
ಕಳೆದ ವರ್ಷ ಮಾರ್ಚ್ ನಿಂದ ಜೂನ್ ವರೆಗಿನ ಮೂರು ತಿಂಗಳ ಅವಧಿಯಲ್ಲಿ, ಅವರು ತಮ್ಮ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡಿ ಗೆದ್ದಿದ್ದರು. ಮಾರಕ ರೋಗದಿಂದ ಚೇತರಿಸಿಕೊಂಡ ಗಿರೀಶ್ ತಮ್ಮ ದಿನನಿತ್ಯದ ಚಟುವಟಿಕೆಗಳಿಗೆ ಮರಳಿದರು. ಇದಲ್ಲದೆ, ತನ್ನ ಕ್ರೀಡಾ ವೃತ್ತಿಜೀವನವನ್ನು ಪುನರುಜ್ಜೀವನಗೊಳಿಸಲು ಅವರು ಸತತ ಅಭ್ಯಾಸದಲ್ಲಿ ನಿರತರಾದರು.
ಒಬ್ಬ ಉತ್ಸಾಹಿ ಕ್ರೀಡಾ ಪಟುವಾದ ಗಿರೀಶ್, ಪುಣೆ ಮತ್ತು ರಷ್ಯಾದಲ್ಲಿ ನಡೆದ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕಗಳನ್ನು ಗೆದ್ದಿರುವುದಲ್ಲದೆ ಕಿಕ್ ಬಾಕ್ಸಿಂಗ್ ನಲ್ಲಿ ಎಂಟು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ. ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಚಾಂಪಿಯನ್ ಶಿಪ್ ಗಾಗಿ, ಗಿರೀಶ್ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದು ವರುಗಳು ಬಾಕ್ಸಿಂಗ್ ಕ್ರೀಡೆಯ ವಿವಿಧ ವರ್ಗಗಳಲ್ಲಿ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

SCROLL FOR NEXT