ಕ್ರೀಡೆ

ಉದ್ದೀಪನ ಮದ್ದು ಸೇವನೆ: ಶಾಟ್ ಪುಟ್ ಎಸೆತಗಾರ ಇಂದರ್ಜೀತ್ ಸಿಂಗ್ ಗೆ 4 ವರ್ಷ ನಿಷೇಧ

Sumana Upadhyaya

ನವದೆಹಲಿ: 2016ರ ರಿಯೊ ಒಲಿಪಿಂಕ್ಸ್ ಗೆ ಮುನ್ನ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲವಾದ ಗುಂಡೆಸೆತಗಾರ(ಶಾಟ್ ಪುಟ್ಟರ್) ಇಂದರ್ಜೀತ್ ಸಿಂಗ್ ಅವರಿಗೆ ನಾಲ್ಕು ವರ್ಷಗಳ ಅಮಾನತ್ತು ವಿಧಿಸಿ ನಾಡಾದ ಉದ್ದೀಪನ ಔಷಧಿ ಸೇವನೆ ವಿರೋಧಿ ಸಂಸ್ಥೆ ಆದೇಶ ಹೊರಡಿಸಿದೆ.

ಇಂದರ್ಜೀತ್ ಸಿಂಗ್ ಅವರ ಸ್ಯಾಂಪಲ್ ನ್ನು ಪಡೆಯುವಾಗ ನಾಡಾ(National Anti-Doping Agency) ಮತ್ತು ಎನ್ ಡಿಟಿಎಲ್(National Doping Test Limited)  ವಾಡಾದ(World Anti-Doping Agency) ನೀತಿ ನಿಯಮಗಳನ್ನು ಪಾಲಿಸಿಲ್ಲ ಎಂದು ಉದ್ದೀಪನ ಔಷಧ ಸೇವನೆಯ ಪರೀಕ್ಷೆ ನಡೆಸುವ ತಂಡ ಒಪ್ಪಿಕೊಂಡರೂ ಸಹ, ಉದ್ದೀಪನ ಔಷಧ ಸೇವನೆ ನಿಯಮವನ್ನು ಉಲ್ಲಂಘಿಸಿಲ್ಲ ಎಂದು ಇಂದರ್ಜೀತ್ ಸಿಂಗ್ ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ರಿಯೊ ಒಲಿಂಪಿಕ್ಸ್ ಪಂದ್ಯಕ್ಕೆ ಮೊದಲಿಗೆ ಅರ್ಹತೆಗೊಂಡಿದ್ದ ಇಂದರ್ಜೀತ್ ಸಿಂಗ್ ಅವರ ಮೂತ್ರದ ಮಾದರಿಯಲ್ಲಿ ಉದ್ದೀಪನ ಔಷಧ ಸೇವನೆಯ ಅಂಶ ಕಂಡುಬಂದ ಕಾರಣ 2016ರ ಜುಲೈ 26ರಂದು ವಜಾಗೊಂಡಿದ್ದರು.

ಉದ್ದೀಪನ ಔಷಧ ಸಂಹಿತೆಯ ಪರಿಚ್ಛೇದ 2.1ನ್ನು ಇಂದರ್ಜೀತ್ ಸಿಂಗ್ ಉಲ್ಲಂಘಿಸಿದ್ದಾರೆ ಎಂದು ಮೂವರು ಸದಸ್ಯರನ್ನೊಳಗೊಂಡ ತಂಡ ಹೇಳಿದೆ. ಆದೇಶದ ಪ್ರತಿ ಪಿಟಿಐ ಸುದ್ದಿಸಂಸ್ಥೆಗೆ ಲಭ್ಯವಾಗಿದೆ.

ಪರಿಚ್ಛೇದ 2.1ನ್ನು ಉಲ್ಲಂಘಿಸಿರುವುದನ್ನು ನಾವು ಎತ್ತಿಹಿಡಿದಿದ್ದು, ತಾತ್ಕಾಲಿಕ ಅಮಾನತಿನ ದಿನಾಂಕದಿಂದ ನಾಲ್ಕು ವರ್ಷಗಳವರೆಗೆ ಪಂದ್ಯಗಳಿಂದ ನಿಷೇಧ ಹೇರಲಾಗಿದೆ ಎಂದು ತಂಡದ ಸದಸ್ಯರು ಹೇಳಿದ್ದಾರೆ. ಅಲ್ಲದೆ ನಾಡಾ ಮತ್ತು ಎನ್ ಡಿಟಿಎಲ್ ನಿರ್ಲಕ್ಷ್ಯದ ಕೆಲಸ ಮಾಡುತ್ತದೆ ಎಂದು ತಂಡ ಆರೋಪಿಸಿದೆ.

SCROLL FOR NEXT