ಕ್ರೀಡೆ

ಥಾಯ್ಲೆಂಡ್ ಓಪನ್: ಸೆಮಿಫೈನಲ್ ಗೆ ಪಿ ವಿ ಸಿಂಧೂ ಲಗ್ಗೆ

Lingaraj Badiger
ಬ್ಯಾಂಕಾಕ್: ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ಅವರು ಪ್ರತಿಷ್ಠಿತ ಥಾಯ್ಲೆಂಡ್ ಓಪನ್ ವರ್ಲ್ಡ್ ಟೂರ್ ಸೂಪರ್ 500 ಟೂರ್ನಮೆಂಟ್ ನಲ್ಲಿ ಶುಕ್ರವಾರ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.
ಪಿವಿ ಸಿಂಧೂ ಇಂದು ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ಮಲೇಷ್ಯಾದ ಸೋನಿಯಾ ಚೀಹಾ ವಿರುದ್ಧ 21-17 21-13ರ ಅಂತರದ ಸುಲಭ ಗೆಲುವು ದಾಖಲಿಸಿದರು.
ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧೂ ಫೈನಲ್ ನಲ್ಲಿ ಇಂಡೋನೇಷ್ಯಾದ ಗ್ರೆಗೊರಿಯಾ ಮರಿಸ್ಕ ಟನ್ಜಾಂಗ್ ವಿರುದ್ಧ ಸೆಣಸಲಿದ್ದಾರೆ.
SCROLL FOR NEXT