ದಾಖಲೆಯ ಮ್ಯಾರಥಾನ್ ಸೆಮಿಫೈನಲ್ ಕೊನೆಗೂ ಅಂತ್ಯ, ಕೆವಿನ್ ಆ್ಯಂಡರ್ಸನ್ ಫೈನಲ್ ಗೆ 
ಕ್ರೀಡೆ

ವಿಂಬಲ್ಡನ್ 2018: ದಾಖಲೆಯ ಮ್ಯಾರಥಾನ್ ಸೆಮಿಫೈನಲ್ ಕೊನೆಗೂ ಅಂತ್ಯ, ಕೆವಿನ್ ಆ್ಯಂಡರ್ಸನ್ ಫೈನಲ್ ಗೆ

ವಿಂಬಲ್ಡನ್ 2018ರ ಟೆನ್ನಿಸ್ ಟೂರ್ನಿಯಲ್ಲಿ ಕೆವಿನ್ ಆ್ಯಂಡರ್ಸನ್ ಮತ್ತು ಜಾನ್ ಇಸ್ನರ್ ನಡುವೆ ನಡೆದ ಪುರುಷರ ಸೆಮಿಫೈನಲ್ಸ್ ಪಂದ್ಯ ದಾಖಲೆಯೊಂದಕ್ಕೆ ಸಾಕ್ಷಿಯಾಗಿದ್ದು, ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯ ಬರೊಬ್ಬರಿ ಆರೂವರೆ ಗಂಟೆ ಕಾಲ ನಡೆದಿದೆ.

ಲಂಡನ್: ವಿಂಬಲ್ಡನ್ 2018ರ ಟೆನ್ನಿಸ್ ಟೂರ್ನಿಯಲ್ಲಿ ಕೆವಿನ್ ಆ್ಯಂಡರ್ಸನ್ ಮತ್ತು ಜಾನ್ ಇಸ್ನರ್ ನಡುವೆ ನಡೆದ ಪುರುಷರ ಸೆಮಿಫೈನಲ್ಸ್ ಪಂದ್ಯ ದಾಖಲೆಯೊಂದಕ್ಕೆ ಸಾಕ್ಷಿಯಾಗಿದ್ದು, ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯ ಬರೊಬ್ಬರಿ ಆರೂವರೆ ಗಂಟೆ ಕಾಲ ನಡೆದಿದೆ.
ಈ ಮ್ಯಾರಥಾನ್ ಪಂದ್ಯದಲ್ಲಿ ಕೆವಿನ್ ಆ್ಯಂಡರ್ಸನ್ ತಮ್ಮ ಪ್ರತಿಸ್ಪರ್ಧಿ ಜಾನ್ ಇಸ್ನರ್ ಅವರನ್ನು 7-6, 6-7, 6-7, 6-4, 26-24 ನೇರ ಸೆಟ್ ಗಳ ಅಂತರದಲ್ಲಿ ಸೋಲಿಸಿದ್ದು, ವಿಂಬಲ್ಡನ್ ಪುರುಷರ ವಿಭಾಗದ ಫೈನಲ್ ಪ್ರವೇಶಿಸಿದ್ದಾರೆ. 
ಒಟ್ಟು ಐದು ಸೆಟ್ ಗಳ ಈ ಪಂದ್ಯದಲ್ಲಿ ಕೆವಿನ್ ಆ್ಯಂಡರ್ಸನ್ 7-6, 6-7, 6-7, 6-4, 26-24 ನೇರ ಸೆಟ್ ಗಳ ಅಂತರದಲ್ಲಿ  ಜಾನ್ ಇಸ್ನರ್ ಅವರನ್ನು ಮಣಿಸಿದರು. ಇಡೀ ಟೂರ್ನಿ ಮಾತ್ರವಲ್ಲದೆ ಟೆನ್ನಿಸ್ ಇತಿಹಾಸದಲ್ಲೇ ದಾಖಲಾದ ಅಂತ್ಯ ಸುಧೀರ್ಘ ಪಂದ್ಯ ಇದಾಗಿದೆ. 
ಮತ್ತೊಂದು ಸೆಮಿಫೈನಲ್ ನಲ್ಲಿ ರಾಫೆಲ್ ನಡಾಲ್ ಮತ್ತು ನೊವಾಕ್ ಜಾಕೋವಿಕ್ ಸೆಣಸುತ್ತಿದ್ದು, ಈ ಪಂದ್ಯದಲ್ಲಿ  ಗೆದ್ದವರು ಕೆವಿನ್ ಆ್ಯಂಡರ್ಸನ್ ವಿರುದ್ಧ ಫೈನಲ್ ನಲ್ಲಿ ಸೆಣಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!