ಕ್ರೀಡೆ

ರಾಫೆಲ್‌ ನಡಾಲ್‌ ಮುಡಿಗೆ 11ನೇ ಫ್ರೆಂಚ್ ಓಪನ್ ಪ್ರಶಸ್ತಿ

Lingaraj Badiger
ಪ್ಯಾರಿಸ್‌: ವಿಶ್ವದ ಅಗ್ರಮಾನ್ಯ ಆಟಗಾರ ಸ್ಪೇನ್ ನ ರಾಫೆಲ್‌ ನಡಾಲ್‌ ಅವರು ಭಾನುವಾರ ದಾಖಲೆಯ 11ನೇ ಫ್ರೆಂಚ್‌ ಓಪನ್‌  ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಇಂದು ಪ್ಯಾರಿಸ್ ನ ರೋಲ್ಯಾಂಡ್‌ ಗ್ಯಾರೋಸ್‌ ಅಂಗಣದಲ್ಲಿ ನಡೆದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಫೈನಲ್ ರಾಫೆಲ್‌ ನಡಾಲ್‌,  ಆಸ್ಟ್ರೇಲಿಯಾದ ಡಾಮಿನಿಕ್ ಥೀಮ್ ಅವರನ್ನು 6–4, 6–3, 6–2 ನೇರ ಸೆಟ್‌ಗಳಿಂದ ಮಣಿಸುವ ಮೂಲಕ ವೃತ್ತಿ ಜೀವನದ 17ನೇ ಗ್ರ್ಯಾನ್‌ ಸ್ಲಾಮ್ ಕಿರೀಟ ಧರಿಸಿದ್ದಾರೆ.
32 ವರ್ಷದ ರಾಫೆಲ್ ನಡಾಲ್ ಅವರು 11ನೇ ಫ್ರೆಂಚ್ ಓಪನ್ ಪ್ರಶಸ್ತಿ ಗೆಲ್ಲುವ ಮೂಲಕ ಒಂದೇ ಗ್ರ್ಯಾನ್ ಸ್ಲ್ಯಾಂ ಟೂರ್ನಿಯಲ್ಲಿ ಹೆಚ್ಚು ಪ್ರಶಸ್ತಿ ಗೆದ್ದ ಮಾರ್ಗರೆಟ್ ಕೋರ್ಟ್‌ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಕೋರ್ಟ್ ಅವರು 1960–70ರ ದಶಕದಲ್ಲಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಒಟ್ಟು 11 ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು.
ರಾಫೆಲ್ ನಡಾಲ್ ಅವರು ಸೆಮಿಫೈನಲ್‌ ಪಂದ್ಯದಲ್ಲಿ ಡೆಲ್‌ ಪೋಟ್ರೊ ಅವರನ್ನು ಸೋಲಿಸಿ 24ನೇ ಬಾರಿಗೆ ಫೈನಲ್‌ ಪ್ರವೇಶಿಸಿದ್ದರು.
SCROLL FOR NEXT