ಕ್ರೀಡೆ

ಆರ್ಚರಿ: ಒಂದು ಗೆಲುವಿನಿಂದ ವಿಶ್ವಕಪ್ ಫೈನಲ್ ನಲ್ಲಿ ಸ್ಥಾನ ಗಿಟ್ಟಿಸಿದ ದೀಪಿಕಾ ಕುಮಾರಿ

Srinivasamurthy VN
ನವದೆಹಲಿ: ಭಾರತದ ಆರ್ಚರಿ ಆಟಗಾರ್ತಿ ದೀಪಿಕಾ ಕುಮಾರಿ ಸಾಲ್ಟ್ ಲೇಕ್ ನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಜರ್ಮನಿಯ ಮಿಷೆಲ್ ಕೋಪ್ರೆನ್ ವಿರುದ್ಧ 7-3 ಅಂತರದ ಗೆಲುವು ಸಾಧಿಸುವ ಮೂಲಕ ವಿಶ್ವಕಪ್ ಫೈನಲ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
4 ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಪದಕಗಳಿಸಿದ್ದ ದೀಪಿಕಾ ಕುಮಾರಿ ಅವರು ಇಂದು ನಡೆದ ಸಾಲ್ಟ್ ಲೇಕ್ ವಿಶ್ವಕಪ್ ಟೂರ್ನಿಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಟರ್ಕಿಯ ಸ್ಯಾಮಸನ್ ನಲ್ಲಿ ನಡೆಯಲಿರುವ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿದ್ದಾರೆ. ಕಳೆದ ಹಲವು ತಿಂಗಳಿನಿಂದ ಫಾರ್ಮ್ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದ ದೀಪಿಕಾ, ಕೊನೆಗೂ ಯಶಸ್ವಿಯಾಗಿದ್ದಾರೆ. ವಿಶ್ವಕಪ್ ನಲ್ಲಿ ದೀಪಿಕಾ ಕುಮಾರಿ ಅವರಿಗೆ ಇದು ಮೊದಲ ವೈಯುಕ್ತಿಕ ಪದಕವಾಗಿದೆ ಎಂಬುದು ವಿಶೇಷ. 
ಈ ಬಗ್ಗೆ ಹೆಮ್ಮೆಯಿಂದ ಮಾತನಾಡಿರುವ ಕೊನೆಗೂ ನಾನು ಪದಕ ಸಂಪಾದಿಸಿದೆ. ಈ ಹಿಂದೆ ವಿಶ್ವಕಪ್ ಪದಕ ಪಡೆದಿದ್ದೆನಾದರೂ, ಇದು ನನ್ನ ಮೊದಲ ವೈಯುಕ್ತಿಕ ಪದಕವಾಗಿದೆ. ಹೀಗಾಗಿ ಹೆಚ್ಚು ಖುಷಿ ತಂದಿದೆ. ಸೋಲು ಅಥವಾ ಗೆಲುವಿಗಿಂತ ಮುಖ್ಯವಾಗಿ ಪಂದ್ಯವನ್ನು ಆಸ್ವಾದಿಸುವುದು ಮುಖ್ಯ. ಸೋಲು ಗೆಲುವಿನ ಕಡೆ ಗಮನ ಹರಿಸದೇ ಉತ್ತಮ ಪ್ರದರ್ಶನದತ್ತ ಗಮನ ನೀಡಿದೆ. ಹೀಗಾಗಿ ಇದು ನನಗೆ ಸಹಕಾರಿಯಾಯಿತು. ಇದೇ ವೇಳೆ ಒಲಿಂಪಿಕ್ಸ್ ಕುರಿತು ಮಾರ್ಮಿಕವಾಗಿ ಮಾತನಾಡಿದ ಅಷ್ಟು ದೊಡ್ಡ ಟೂರ್ನಿಯಲ್ಲಿ ಪಾಲ್ಗೊಳ್ಳದೇ ಇರಲು ಯಾರು ಇಚ್ಛಿಸುತ್ತಾರೆ ಎನ್ನುವ ಮೂಲಕ ತಾವಿನ್ನೂ ಒಲಿಂಪಿಕ್ಸ್ ನಲ್ಲಿ ಆಡಲು ಬದ್ಧ ಎಂದು ಆಯ್ಕೆಗಾರರಿಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ.
SCROLL FOR NEXT