ಭಾರತದ ಜನಪ್ರಿಯ ಪ್ಯಾರಾ ಈಜುಪಟು ಪ್ರಶಾಂತ್ ಕರ್ಮಾಕರ್
ನವದೆಹಲಿ; ಮಹಿಳಾ ಈಜುಪಟುಗಳ ವಿಡಿಯೋ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ಯಾರಾಲಿಂಪಿಕ್ ಸಮತಿಯಿಂದ 3 ವರ್ಷ ನಿಷೇಧಕ್ಕೊಳಗಾಗಿರುವ ಭಾರತದ ಜನಪ್ರಿಯ ಪ್ಯಾರಾ ಈಜುಪಟು ಪ್ರಶಾಂತ್ ಕರ್ಮಾಕರ್ ಅವರು ಸಮಿತಿ ವಿರುದ್ಧ ತೀವ್ರ ಕಿಡಿಕಾರಿದ್ದು, ಇದೊಂದು ಪೂರ್ವ ನಿಯೋಜಿತ ಪಿತೂರಿ ಎಂದು ಹೇಳಿದ್ದಾರೆ.
ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ಪ್ರಶಾಂತ್ ಅವರು, ಇದೊಂದು ಪೂರ್ವ ನಿಯೋಜಿತ ಪಿತೂರಿಯಾಗಿದೆ. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಹಲವರು ಸುಳ್ಳು ದಾಖಲೆಗಳನ್ನು ನೀಡಿ ಪದಕಗಳನ್ನು ಜಯಿಸಿದ್ದರು. ಅದರ ವಿಡಿಯೋವನ್ನು ಮಾಡುತ್ತಿದ್ದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಜೈಪುರದಲ್ಲಿ ನಡೆದ ಇಡೀ ಘಟನೆಯನ್ನು ನನ್ನ ವಿರುದ್ಧ ತಿರುಚಲಾಗಿದೆ. 6 ರಿಂದ 7 ಈಜುಪಟುಗಳಿಗೆ ನಾನು ತರಬೇತಿ ನೀಡಿದ್ದೇನೆ. ಈಜುಗಾರ್ತಿಯೋರ್ವಳ ಪೋಷಕರೊಬ್ಬರು ನನ್ನ ವಿದ್ಯಾರ್ಥಿಗಳ ವಿಡಿಯೋ ಮಾಡುತ್ತಿದ್ದರು. ಆದರೆ, ಪಿಸಿಐ ಇಡೀ ಪ್ರಕರಣವನ್ನೇ ತಿರುಚಿದೆ. ನನ್ನ ಮೇಲೆ ಪೊಲೀಸರು ಆಧಾರ ರಹಿತ ದೂರು ದಾಖಲಿಸಿಕೊಂಡಿದ್ದಾರೆಂದು ತಿಳಿಸಿದ್ದಾರೆ.