ಕ್ರೀಡೆ

ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ವಿದ್ಯಾರ್ಥಿಗಳಿಗೆ ಬರೀ ಜಪಾನ್ ನಿಂದ ಆಮದಾದ ಮೊಟ್ಟೆಗಳು!

Nagaraja AB

ಹೈದ್ರಾಬಾದ್ :  ಮೊಟ್ಟೆ ಉತ್ಪಾದನೆಯಲ್ಲಿ ತೆಲಂಗಾಣ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿದೆ. ಆದರೆ. ಇಲ್ಲಿನ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ವಿದ್ಯಾರ್ಥಿಗಳಿಗೆ  ದಿನನಿತ್ಯ ಬರೀ ಜಪಾನ್ ನಿಂದ ಆಮದಾದ  ಪ್ರೀಮಿಯಂ ಮೊಟ್ಟೆಯನ್ನು ನೀಡಲಾಗುತ್ತಿದೆ.

ತೆಲಂಗಾಣ ಹ್ಯಾಟ್ ಚೇರಿಸ್ ಮೊಟ್ಟೆಗಳು ಬ್ಯಾಡ್ಮಿಂಟನ್ ಆಟಗಾರರಿಗೆ ಒಳ್ಳೆಯದಲ್ಲ. ಹಾಗಾಗೀ ಟೊಕಿಯಾದಲ್ಲಿ 2020 ರಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟ ಮುಗಿಯುವವರೆಗೂ ಪ್ರೀಮಿಯಂ ಮೊಟ್ಟೆ ಆಮದು ಮಾಡುವಂತೆ ಜಪಾನ್ ನ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

 ಪಶು ಸಂಗೋಪನಾ ಸಚಿವಾಲಯದ ಅಂಕಿ ಅಂಶದ ಪ್ರಕಾರ ತೆಲಂಗಾಣ 2016-17ರ ಅವಧಿಯಲ್ಲಿ  1.181 ಕೋಟಿ ಮೊಟ್ಟೆ ಉತ್ಪಾದಿಸುವ ಮೂಲಕ ದೇಶದಲ್ಲಿಯೇ ಮೂರನೇ ಸ್ಥಾನ ಪಡೆದುಕೊಂಡಿದೆ.

, 2020 ರಲ್ಲಿ ನಡೆಯುವ ಒಲಿಂಪಿಕ್ ಕ್ರೀಡಾಕೂಟದ ಸಿದ್ಧತೆ ಹಿನ್ನೆಲೆಯಲ್ಲಿ  ಇಲ್ಲಿನ ಆಟಗಾರರಿಗೆ ಅಂತಾರಾಷ್ಟ್ರೀಯ ಗುಣಮಟ್ಟದ  ಪ್ರೀಮಿಯಂ ಮೊಟ್ಟೆ ನೀಡಲಾಗುತ್ತಿದೆ ಎಂದು ಐಎಸ್ ಇ ಆಹಾರ  ಪೂರೈಕೆ   ಕಂಪನಿಯ ವೆಬ್ ಸೈಟ್ ನಲ್ಲಿ  ಮಾಹಿತಿ ನೀಡಲಾಗಿದೆ.


SCROLL FOR NEXT