ಕ್ರೀಡೆ

ಕಾಮನ್ವೆಲ್ತ್ ಗೇಮ್ಸ್: 221 ಕ್ರೀಡಾಪಟು ಹೆಸರು ಅಂತಿಮ

Raghavendra Adiga
ನವದೆಹಲಿ: ಮುಂದಿನ ತಿಂಗಳು ಗೋಲ್ಡ್ ಕೋಸ್ಟ್ ನಲ್ಲಿ ನಡೆಯಲಿರುವ ಪ್ರತಿಷ್ಠಿತ ಕಾಮನ್ವೆಲ್ತ್ ಕ್ರೀಡಾಕೂಟಕ್ಕಾಗಿ 221 ಕ್ರೀಡಾಪಟುಗಳು ಸೇರಿದಂತೆ 325 ಸದಸ್ಯರ ಭಾರತೀಯ ತಂಡವನ್ನು ಕ್ರೀಡಾ ಸಚಿವಾಲಯ ಇಂದು ಅಂತಿಮಗೊಳಿಸಿದೆ. 
ಆದರೆ ಭಾರತೀಯ ಒಲಂಪಿಕ್  ಸಂಸ್ಥೆ ಹೆಸರಿಸಿದ್ದ ಇಬ್ಬರು ಸಿಬ್ಬಂದಿಗಳ ಹೆಸರನ್ನು ಕೈಬಿಡಲಾಗಿದೆ.
ಇನ್ನು 325 ಜನರ ಆಯ್ಕೆ ಪಟ್ಟಿಯಲ್ಲಿ 58 ತರಬೇತುದಾರರು, 7 ಮ್ಯಾನೇಜರ್ ಗಳು,  17 ವೈದ್ಯರು ಹಾಗೂ 22 ಇತರೆ ಅಧಿಕಾರಿಗಳು ಸೇರಿದ್ದಾರೆ. ಇದೇ ವೇಳೆಎಲ್ಲಾ ಅಧಿಕಾರಿಗಳು ಸರ್ಕಾರದ ವೆಚ್ಚದಲ್ಲಿ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಹೋಗುತ್ತಿಲ್ಲ. ಒಟ್ಟು 54 ತರಬೇತುದಾರರು, 16 ವೈದ್ಯರು, 19 ಇತರ ಅಧಿಕಾರಿಗಳು, 221 ಕ್ರೀಡಾಪಟುಗಳ ವೆಚ್ಚವನ್ನಷ್ಟೇ ಭರಿಸುತ್ತಿದೆ.
ಪಿ ವಿ ಸಿಂಧು ತಾಯಿ ವಿಜಯ ಪುಸರ್ಲಾ ಮತ್ತು ಸೈನಾ ನೆಹ್ವಾಲ್ ಅವರ ತಂದೆ ಹರ್ವಿರ್ ಸಿಂಗ್ ಸೇರಿದಂತೆ 15 ಅಧಿಕಾರಿಗಳು  ಕ್ರೀಡಾಕೂಟದಲ್ಲಿ ಭಾಗಿಗಳಾಗುತ್ತಿದ್ದಾರೆ. ಇನ್ನು ಏಳು ವ್ಯ್ವಸ್ಥಾಪಕರ ವೆಚ್ಚವನ್ನು ಸಹ ಆಯಾ ಫೆಡರೇಷನ್ ಗಳೇ ಭರಿಸುತ್ತಿವೆ
ಆಯ್ಕೆಗೊಂಡ 221 ಕ್ರೀಡಾಪಟುಗಳಲ್ಲಿ   ಒಟ್ಟು 219 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಶಸ್ತ್ರಚಿಕಿತ್ಸೆಯ ಕಾರಣ ಉದ್ದ ಜಿಗಿತಗಾರ  ಎಂ.ಶ್ರೀಶಂಕರ ಕ್ರೀಡಾಕೂಟದಿಂದ ದೂರ ಉಳಿದರೆ ಅತ್ಯಾಚಾರ ಆರೋಪಕ್ಕೆ ಗುರಿಯಾಗಿದ್ದ ಸೌಮ್ಯಜಿತ್ ಘೋಷ್ ಸಹ ಕಾಮನ್ವೆಲ್ತ್ ಕೂಟದಿಂದ ಹೊರಗುಳಿದಿದ್ದಾರೆ.
ಇನ್ನು ಕ್ರೀಡಾಕೂಟಕ್ಕೆ ಆಯ್ಕೆಯಾದ ತಂಡದ ವಿವರ ಹೀಗಿದೆ-
SCROLL FOR NEXT