ಕ್ರೀಡೆ

ವಿಶ್ವ ಕುಸ್ತಿ ರ್ಯಾಂಕಿಂಗ್: ಅಗ್ರಸ್ಥಾನಕ್ಕೆ ಬಜರಂಗ್ ಪುನಿಯಾ!

Raghavendra Adiga
ಲಾಸನ್ನೆ(ಸ್ವಿಡ್ಜರ್ ಲ್ಯಾಂಡ್): ಸ್ಟಾರ್ ಇಂಡಿಯನ್ ಕುಸ್ತಿಪಟು ಬಜರಂಗ್ ಪುನಿಯಾ ಅವರು ತಮ್ಮ ವೃತ್ತಿಜೀವನದಲ್ಲಿ 65 ಕೆ.ಜಿ ವಿಭಾಗದಲ್ಲಿ ವಿಶ್ವ ನಂಬರ್ 1 ಸ್ಥಾನಕ್ಕೆ ಏರಿದ್ದಾರೆ. 
ಈ ವರ್ಷ ನಡೆದ  ಸಿಡಬ್ಲ್ಯೂಜಿ ಮತ್ತು ಏಶಿಯನ್ ಗೇಮ್ಸ್ ಚಿನ್ನದ ಪದಕ ಮತ್ತು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದ 24 ವರ್ಷ ವಯಸ್ಸಿನ ಬಜರಂಗ್ ಯು.ಡಬ್ಲ್ಯೂಡಬ್ಲ್ಯು ಪಟ್ಟಿಯಲ್ಲಿ 96 ಅಂಕಗಳೊಂದಿಗೆ ಅಗ್ರ ಶ್ರೇಯಾಂಕಿತರಾಗಿ ಹೊರಹೊಮ್ಮಿದ್ದಾರೆ.
ಬಜರಂಗ್ ಪಾಲಿಗಿದು ಅತ್ಯಂತ ಶೇಷ್ಠ ಸಾಧನೆಯಾಗಿದ್ದು ಬುಡಾಪೆಸ್ಟ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುವ ಅವರಿಗೆ ಇದು ಉತ್ತಮ ಅವಕಾಶ ಕಲ್ಪಿಸಿಕೊಡುತಿದೆ.
ಕ್ಯೂಬಾದ ಅಲೆಜಾಂಡ್ರೊ ಎನ್ರಿಕ್ ವ್ವಾಡೆಸ್ ಟೋಬಿರ್ 66 ಅಂಕಗಳೊಂದಿಗೆ ದ್ವಿತೀಯ ಶ್ರೇಯಾಂಕ ಪಡೆಇದಿದ್ದಾರೆ. ಬುಡಾಪೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಟೋಬಿರ್ ವಿರುದ್ಧ ಸೆಮಿ ಫೈನಲ್ಸ್ ಸುತ್ತಿನಲ್ಲಿ ಬಜರಂಗ್ ಜಯ ಸಾಧಿಸಿದ್ದರು.
ಇನ್ನುಳಿದಂತೆ ರೆಅಷ್ಯಾದ ಅಖ್ಮೆದ್ ಚಕಾಯೆವ್ (62) ಮೂರನೆಯ ಸ್ಥಾನ, ನೂತನ ವಿಶ್ವ ಚಾಂಪಿಯನ್ ಆಗಿರುವ  ತಕೊಟೊ ಒಟಾಗುರೋ (56) ನಾಲ್ಕನೇ ಸ್ಥಾನದಲ್ಲಿದ್ದಾರೆ.
ಪುರುಷರ ವಿಭಾಗದಲ್ಲಿ ಟಾಪ್ ಹತ್ತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ಬಜರಂಗ್ ಆಗೈದ್ದಾರೆ. ಇದೇ ವೇಳೆ ಮಹಿಳಾ ಕುಸ್ತಿ ಪಟುಗಳ ಪೈಕಿ ಐವರು ಭಾರತೀಯ ಮಹಿಳೆಯರು ಟಾಪ್ ಹತ್ತರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.
ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತೀಯ ಮಹಿಳೆಯರ ವಿವರ ಹೀಗಿದೆ-\
ಪೂಜಾ ಧಂಡಾ - 52 ಅಂಕ - ಆರನೇ ಸ್ಥಾನ
ಸರಿತಾ ಮೋರ್ - 29 ಅಂಕ - ಏಳನೇ ಸ್ಥಾನ 
ನವಜೋತ್ ಕೌರ್ (32) ಮತ್ತು ಕಿರಣ್ (37)  ಒಂಬತ್ತನೇ ಸ್ಥಾನ
ರಿತು ಫೊಗಟ್ - 33 ಅಂಕ - 10 ನೇ ಸ್ಥಾನ
SCROLL FOR NEXT