ನವದೆಹಲಿ: ಇಂಡೋನೇಷ್ಯಾದಲ್ಲಿ ನಡೆದ ಏಷ್ಯನ್ ಗೇಮ್ ನಲ್ಲಿ ಭಾರತದ ತೇಜಿಂದರ್ ಪಾಲ್ ಸಿಂಗ್ ಅವರು ಶಾಟ್ ಫುಟ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಅದೇ ಖುಷಿಯಲ್ಲಿ ಊರಿನತ್ತ ಮರಳುತ್ತಿದ್ದ ತೇಜಿಂದರ್ ಗೆ ತಂದೆ ವಿಧಿವಶರಾದ ಸುದ್ದಿ ಸಿಕ್ಕಿದೆ. ತಂದೆಗೆ ಚಿನ್ನದ ಪದಕ ತೋರಿಸಬೇಕೆಂಬ ಸಿಂಗ್ ಕನಸು ಹಾಗೇ ಕಮರಿ ಹೋಗಿದೆ.
ತೇಜಿಂದರ್ ಪಾಲ್ ಸಿಂಗ್ ಅವರ ತಂದೆ ನಿಧನದ ಬಗ್ಗೆ ಟ್ವೀಟ್ ಮಾಡಿರುವ ಅಥ್ಲೇಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ, ಈ ಸುದ್ದಿ ಕೇಳಿ ಎಎಫ್ ಐಗೆ ಆಘಾತವಾಗಿದೆ. ನಾವು ಈಗಷ್ಟೇ ಏಶ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆದ ತೇಜಿಂದರ್ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದೆವು. ಆದರೆ ಇದೇ ಸಂದರ್ಭದಲ್ಲಿ ತೇಜಿಂದರ್ ತಂದೆ ನಿಧನರಾದ ಸುದ್ದಿಯ ಸಂದೇಶ ಕೂಡಾ ಬಂದಿತ್ತು ಎಂದು ಟ್ವೀಟ್ ಮಾಡಿದೆ.
ಮಗ ಏಶ್ಯನ್ ಗೇಮ್ಸ್ ನಲ್ಲಿ ಪಡೆಯುವ ಚಿನ್ನದ ಪದಕವನ್ನು ತನ್ನ ಕೈಯಲ್ಲಿ ಹಿಡಿದುಕೊಳ್ಳಬೇಕೆಂಬುದು ತೇಜಿಂದರ್ ಅವರ ತಂದೆ ಕರಮ್ ಸಿಂಗ್ ಅವರ ಆಸೆಯಾಗಿತ್ತಂತೆ. ಆದರೆ ವಿಧಿ ವಿಪರ್ಯಾಸ, ಕೊನೆಗೂ ಆ ಆಸೆ ಈಡೇರಲೇ ಇಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos