ಕ್ರೀಡೆ

ರೋಲರ್ ಸ್ಕೇಟಿಂಗ್ ನಲ್ಲಿ ಮೈಸೂರಿನ ರಿಯಾಗೆ ಕಂಚು

Manjula VN
ಮೈಸೂರು: ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್'ನಲ್ಲಿ ಮೈಸೂರಿನ ರಿಯಾ ಎಲಿಜಬತ್  ಅಚಯ್ಯ ಕಂಚಿನ ಪದಕ ಗೆದ್ದಿದ್ದಾರೆ. 
ಮೈಸೂರಿನ ಮಹಾರಾಜಾ ಪಿಯು ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿರುವ 17 ವರ್ಷದ ರಿಯಾ 15,000 ಮೀಟರ್ ಎಲಿಮಿನೇಷನ್ ರೇಸ್'ನಲ್ಲಿ ಕಂಚು ಜಯಿಸುವುದರೊಂದಿಗೆ ಕೂಟದಲ್ಲಿ ಭಾರತದ ಪದಕದ ಖಾತೆ ತೆರೆದಿದ್ದಾರೆ. 
ಕಂಚಿನ ಪದಕ ಗೆದ್ದಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ರಿಯಾ ಅವರು, ಕೊರಿಯಾ ಜೊತೆಗೆ ಅತ್ಯಂತ ಕಠಿಣ ಸ್ಪರ್ಧೆಯಿತ್ತು. ಆದರೂ, ಗೆಲ್ಲುವ ವಿಶ್ವಾಸ ನನಗಿತ್ತು. ಏಷ್ಯನ್ ರೋಲರ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್'ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ಎರಡನೇ ಬಾರಿ ಎಂದು ಹೇಳಿದ್ದಾರೆ. 
ಪುತ್ರಿಯ ಸಾಧನೆ ಬಕ್ಕೆ ಮಾತನಾಡಿರುವ ಪೋಷಕರಾದ ಕೆ.ಎನ್. ಅಚಯ್ಯ  ಮತ್ತು ಪ್ರಿಯಾ ಅಚಯ್ಯ ಅವರು, ಕೇವಲ ಮನರಂಜನೆಗಾಗಿ ಅಷ್ಟೇ ಆಕೆಯ ಹೆಸರನ್ನು ನೀಡಲಾಗಿತ್ತು. ಆದರೆ, ಇದೀಗ ಆಕೆ ಪದಕವನ್ನು ಗೆದ್ದಿದ್ದಾಳೆ. ಕ್ರೀಡೆಯನ್ನು ಆಕೆ ಉತ್ಸಾಹದಿಂದ ತೆಗೆದುಕೊಂಡಿದ್ದಾಳೆ. 8 ವರ್ಷದವಳಿರುವಾಗಲೇ ಮೊದಲ ಬಾರಿಗೆ ರಾಷ್ಟ್ರೀಯ ಚಾಂಪಿಯನ್ ಆಗಿದ್ದಳು. ಕರ್ನಾಟಕವನ್ನು ಪ್ರತಿನಿಧಿಸಿ ಕಂಚಿನ ಪದಕವನ್ನು ಗೆದ್ದಿದ್ದಳು. ಈ ವರೆಗೂ ರಾಷ್ಟ್ರೀಯ ಮಟ್ಟದಲ್ಲಿ 7 ಬಾರಿ ಸ್ಪರ್ಧಿಸಿದ್ದಳು. 15 ಚಿನ್ನ, 5 ಬೆಳ್ಳಿ ಹಾಗೂ 4 ಕಂಚನ್ನು ಗೆದ್ದಿದ್ದಾಳೆ. ವಿದ್ಯಾಭ್ಯಾಸದೊಂದಿಗೆ ಕ್ರೀಡೆಯನ್ನು ನಿರ್ವಹಿಸುತ್ತಿದ್ದಾಳೆಂದು ಹೇಳಿದ್ದಾರೆ. 
ಸೆ.4 ರಿಂದ ಆರಂಭಗೊಂಡಿರುವ ಈ ಚಾಂಪಿಯನ್'ಸಿಪ್ ಸೆ.14ಕ್ಕೆ ಮುಕ್ತಾಯಗೊಳ್ಳಲಿದೆ. 
SCROLL FOR NEXT