ರೆಫರಿಯೊಂದಿಗೆ ಸೆರೆನಾ ಮಾತಿನ ಸಮರ
ವಾಷಿಂಗ್ಟನ್: ಅಮೆರಿಕದಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ 2018ರ ಟೆನ್ನಿಸ್ ಟೂರ್ನಿಯ ಫೈನಲ್ ಪಂದ್ಯ ಹೈಡ್ರಾಮಾವೊಂದಕ್ಕೆ ಸಾಕ್ಷಿಯಾಗಿದ್ದು, ರೆಫರಿ ಮತ್ತು ಸೆರೆನಾ ವಿಲಿಯಮ್ಸ್ ತೀವ್ರ ಮಾತಿನ ಚಕಮಕಿ ನಡೆಸಿದ್ದಾರೆ.
ಪೈನಲ್ ಪಂದ್ಯದಲ್ಲಿ ಸೆರೆನಾ ಜಪಾನ್ ದೇಶದ ಅಗ್ರ ಆಟಗಾರ್ತಿ ನವೋಮಿ ಒಸಾಕಾ ಅವರ ವಿರುದ್ಧ 6-2 ಮತ್ತು 6-4 ನೇರ ಸೆಟ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡರು. 2ನೇ ಸೆಟ್ ವೇಳೆ ಅಂಪೈರ್ ನೀಡಿದ ತೀರ್ಮಾನವನ್ನು ಸೆರೆನಾ ವಿಲಿಯಮ್ಸ್ ವಿರೋಧಿಸಿದರು. ಇದು ಆಟಾಗರರ ಶಿಸ್ತಿನ ಉಲ್ಲಂಘನೆ ಎಂದು ರೆಫರಿ ಎದುರಾಳಿ ಆಟಗಾರ್ತಿ ಪೆನಾಲ್ಟ್ ಅಂಕ ನೀಡಿದರು. ಇದರಿಂದ ಸಿಡಿಮಿಡಿಗೊಂಡ ಸೆರೆನಾ ಮೈದಾನದಲ್ಲೇ ಮಾತಿನ ಚಕಮಕಿ ನಡೆಸಿದರು.
ಬಳಿಕ ಪಂದ್ಯದ ಬಳಿಕ ಮಾತನಾಡಿದ ಸೆರೆನಾ ನಾನೇನು ಮೋಸ ಮಾಡಿಲ್ಲ. ಇದು ಪಂದ್ಯದ ರೆಫರಿ ಕಾರ್ಲೋಸ್ ರಾಮೋಸ್ ಅವರು ನಿಜಕ್ಕೂ ಓರ್ವ ಸುಳ್ಳುಗಾರ, ನನ್ನ ಗೆಲುವು ಕಸಿದಿದ್ದಾರೆ. ನಾನು ಮಾಡದ ತಪ್ಪಿಗೆ ಕ್ಷಮೆ ಕೇಳುವಂತೆ ಸೂಚಿಸಿದ್ದಾರೆ. ಪಂದ್ಯದ ವೇಳೆ ನಾನು ಕೋಚ್ ಪ್ಯಾಟ್ರಿಕ್ ಮೌರಟೊಗ್ಲೋ ಯಾವುದೇ ಸನ್ಹೆ ಮಾಡಿಲ್ಲ. ಹೀಗಿದ್ದೂ ನನ್ನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಎಂದಿನಿಂತೆ ಇಲ್ಲಿಯೂ ಲಿಂಗತಾರತಮ್ಯ ಮುಂದುವರೆದಿದ್ದು, ಮಹಿಳೆಯರನ್ನು ನಿರ್ವಹಿಸುವ ಪದ್ಧತಿಯೇ ಬೇರೆ ರೀತಿಯಲ್ಲಿದೆ. ಇದಕ್ಕೆ ಕಾರ್ನೆಟ್ ಪ್ರಕರಣ ಒಂದು ಉದಾಹರಣೆಯಷ್ಟೇ. ಮೈದಾನದಲ್ಲಿ ಶರ್ಟ್ ಬದಲಾಸಿದ ಕಾರ್ನೆಟ್ ಗೆ ದಂಡ ವಿಧಿಸುವುದಾದರೆ, ಮೈದಾನದಲ್ಲೇ ಶರ್ಟ್ ಬಿಚ್ಚಿ ಕುಳಿತುಕೊಳ್ಳುವ ಪುರುಷ ಆಟಗಾರರ ವಿರುದ್ಧ ಕ್ರಮವೇಕಿಲ್ಲ. ನಾನು ಇಲ್ಲಿ ಮಹಿಳಾ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇನೆ ಎಂದು ಸೆರೆನಾ ಹೇಳಿದ್ದಾರೆ.
ಕಾರ್ನೆಟ್ ವಿರುದ್ಧ ಬಳಸಿದ್ದ ಅದೇ ಅಸ್ತ್ರವನ್ನು ನನ್ನ ವಿರುದ್ಧವೂ ಬಳಕೆ ಮಾಡಲು ಸಂಚು ರೂಪಿಸಿದ್ದರು, ಆದರೆ ಅದು ಸಾಧ್ಯವಾಗಲಿಲ್ಲ ಎಂದು ಸೆರೆನಾ ಕಿಡಿಕಾರಿದ್ದಾರೆ. ಅಂತೆಯೇ ಫೈನಲ್ ಪಂದ್ಯದ ರೆಫರಿ ಕಾರ್ಲೋಸ್ ರಾಮೋಸ್ ಅವರನ್ನು ಸುಳ್ಳುಗಾರ ಎಂದ ಸೆರೆನಾ, ಪಂದ್ಯವನ್ನು ನನ್ನಿಂದ ಕಸಿದ ಮಹಾ ಕಳ್ಳ ಎಂದು ಟೀಕಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos