ಕ್ರೀಡೆ

ಐಎಸ್ಎಸ್ಎಫ್ ವಿಶ್ವಕಪ್: ಅಭಿಷೇಕ್ ವರ್ಮಾಗೆ ಚಿನ್ನ, ಒಲಂಪಿಕ್‍ಗೆ ಅರ್ಹತೆ ಪಡೆದ ಭಾರತೀಯ ಶೂಟರ್

Raghavendra Adiga
ಬೀಜಿಂಗ್: ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್ಎಸ್ಎಫ್) ವಿಶ್ವಕಪ್ ಪಂದ್ಯಾವಳಿಯ 10 ಮೀ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ  ಶೂಟರ್ ಅಭಿಷೇಕ್ ವರ್ಮಾ ಚಿನ್ನದ ಪದಕ ಗೆದ್ದಿದ್ದಾರೆ.
ವರ್ಮಾ ಪಾಲಿಗೆ ಇದು ಎರಡನೇ ಶೂಟಿಂಗ್ ವಿಶ್ವಕಪ್ ಆಗಿತ್ತು. ವರ್ಮಾ ಫೈನಲ್ ಸುತ್ತಿನಲ್ಲಿ  242.7 ಅಂಕಗಳಿಸಿ ಈ ಸಾಧನೆ ಮಾಡಿದ್ದಾರೆ.
ಇನ್ನು ಇದೇ ವಿಭಾಗದಲ್ಲಿ  ರಷ್ಯಾದ ಆರ್ಟೆಮ್ ಚೆರ್ನೌಸೊವ್ 240.4 ಅಂಕಗಳೊಂದಿಗೆ ಬೆಳ್ಳಿ, ಕೊರಿಯಾದ ಹಾನ್ ಸಿಯುಂಗ್ ವೂ  220.0 ಅಂಕದೊಂದಿಗೆ ಕಂಚಿನ ಪದಕವನ್ನು ಪಡೆದರು
 2018 ರ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತರಾಗಿದ್ದ ಅಭಿಷೇಕ್ ವರ್ಮಾ ಈ ಚಿನ್ನದೊಡನೆ ಟೋಕಿಯೋದಲ್ಲಿ ನಡೆಯಲಿರುವ 2020 ರ ಒಲಂಪಿಕ್ ನಲ್ಲಿ ಭಾಗವಹಿಸುವ ಅರ್ಹತೆ ಪಡೆಇದ್ದಾರೆ.
ಇದಲ್ಲದೆ ಬಾರತದ  10 ಮಿ ಏರ್ ರೈಫಲ್ ಶೂಟರ್ ದಿವ್ಯಾನ್ಶ್ ಸಿಂಗ್ ಹಾಗೂ ಸೌರಭ್ ಚೌಧರಿ ಸಹ ಒಲಂಪಿಕ್ ಅರ್ಹತೆ ಪಡೆದುಕೊಂಡಿದ್ದರು. ಮಹಿಳೆಯರಲ್ಲಿ, ಅಂಜುಮ್ ಮೌಡ್ಗಿಲ್ ಮತ್ತು ಅಪೂರ್ವಿ ಚಾಂಡೇಲಾ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಒಲಂಪಿಕ್ ಗೆ ಅರ್ಹತೆ ಪಡೆಇದ್ದಾರೆ.
SCROLL FOR NEXT