ಕ್ರೀಡೆ

ಮೊದಲ ಬಾರಿ ಪಿವಿ ಸಿಂಧು ಮುಡಿಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಕಿರೀಟ

Lingaraj Badiger

ಬಾಸೆಲ್: ಭಾರತದ ನಂಬರ್ ಒನ್ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ಮೊದಲ ಬಾರಿಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಅನ್ನು ತಮ್ಮ ಮುಡಿಗೆೇರಿಸಿಕೊಳ್ಳುವ ಮೂಲಕ ಬ್ಯಾಡ್ಮಿಂಟನ್‌ ವಿಶ್ವ ಸಾಮ್ರಾಜ್ಞಿಯಾದ ಭಾರತದ ಮೊದಲ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ.

ಇಂದು ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಜಪಾನ್ ನ ನೋಜೊಮಿ ಓಕುಹರಾ ಅವರನ್ನು 21-7, 21-7ರ ಅಂತರದಿಂದ ಮಣಿಸುವ ಮೂಲಕ ಇತಿಹಾಸ ಪುಟ ಸೇರಿದ್ದಾರೆ.

ಈ ಜೋಡಿ ತಮ್ಮ ಭರ್ಜರಿ ಆಟದಿಂದಲೇ ಅಭಿಮಾನಿಗಳ ಮನ ಗೆದ್ದಿದ್ದು, 2017ರಲ್ಲಿ ಇದೇ ಟೂರ್ನಿಯ ಫೈನಲ್ ನಲ್ಲಿ ಸಿಂಧು ಅವರನ್ನು ಮಣಿಸಿ ಒಕುಹರಾ ಪ್ರಶಸ್ತಿ ಎತ್ತಿ ಸಂಭ್ರಮಿಸಿದ್ದರು. 
ಕಳೆದ ವರ್ಷ ಸಿಂಧು ಅವರು ಸ್ಪೇನ್ ಸ್ಟಾರ್ ಆಟಗಾರ್ತಿ ಕರೋಲಿನಾ ಮರಿನ್ ವಿರುದ್ಧ ಸೋತು ನಿರಾಸೆಯನ್ನು ಅನುಭವಿಸಿದ್ದರು. ಈ ಬಾರಿ ಸತತ ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಶಿಪ್ ಫೈನಲ್ ಪ್ರವೇಶಿಸಿದ್ದ ಸಿಂಧು, ಚೊಚ್ಚಲ ಬಂಗಾರದ ಕನಸು ನನಸು ಮಾಡಿಕೊಂಡಿದ್ದಾರೆ.

SCROLL FOR NEXT