ಕ್ರೀಡೆ

ಯುಎಸ್ ಓಪನ್ 2019: ವಿಶ್ವಶ್ರೇಷ್ಠ ಫೆಡರರ್ ಎದುರು ಕೆಚ್ಚೆದೆಯ ಹೋರಾಟ ನಡೆಸಿ ಮಣಿದ ನಗಾಲ್

Raghavendra Adiga

ಯುಎಸ್ ಓಪನ್ ಮೊದಲ ದಿನದಾಟದಲ್ಲಿ ವಿಶ್ವ ಶ್ರೇಷ್ಠ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಎದುರು ಭಾರತದ ಪ್ರತಿಭೆ ಸುಮಿತ್ ನಗಾಲ್ ಪರಾಜಿತರಾಗಿದ್ದಾರೆ.

ಫೆಡರರ್ ನಗಾಲ್ ಅವರನ್ನು 4-6, 6-1, 6-2, 6-4 ಸೆಟ್‌ಗಳಿಂದ ಮಣಿಸಿದರು.

ಸೋಮವಾರ ನಡೆದ ಯುನೈಟೆಡ್ ಸ್ಟೇಟ್ಸ್ ಓಪನ್ ಪಂದ್ಯಾವಳಿಯಲ್ಲಿ ಮೊದಲಸೆಟ್ ನಲ್ಲಿ ನಗಾಲ್ ಉತ್ತಮ ಪ್ರದರ್ಶನ ನಿಡಿ  6-4. ಅಂತರದ ಗೆಲುವು ಸಾಧಿಸಿದ್ದರೂ ನಂತರದ ಸೆಟ್ ಗಳಲ್ಲಿ ಫೆಡರರ್ ಮತ್ತೆ ಟ್ರ್ಯಾಕ್ ಗೆ ಮರಳಿದ್ದರು. 190 ನೇ ಶ್ರೇಯಾಂಕದ ಭಾರತದ ಆಟಗಾರ ಸುಮಿತ್ ವಿಶ್ವರ ನಂ.3 ಆಟಗಾರನ ವಿರುದ್ಧ ತೀವ್ರ ಸ್ಪರ್ಧೆ ಒಡ್ಡಿದರೂ ಗೆಲುವು ಸಾಧಿಸಲಾಗಲಿಲ್ಲ.

ಜುಲೈನಲ್ಲಿ ವಿಂಬಲ್ಡನ್‌ನಲ್ಲಿ ನಡೆದ ಫೈನಲ್‌ನಲ್ಲಿ ಸೋತ ಫೆಡರರ್ 22 ವರ್ಷದ ನಗಾಲ್ ನನ್ನು ಮಣಿಸುವ ಮೂಲಕ ಯಶಸ್ವಿಯಾಗಿ ಎರಡನೇ ಸುತ್ತು ಪ್ರವೇಶಿಸಿದರೆ ನಗಾಲ್ ಟೂರ್ನಿಯಿಂದ ಹೊರನಡೆದಿದ್ದಾರೆ.

ಇನ್ನೊಂದೆಡೆ ಮೊದಲ ದಿನದಾಟದಲ್ಲಿ ರೆನಾ ವಿಲಿಯಮ್ಸ್, ನೊವಾಕ್ ಜೊಕೊವಿಕ್ ಮತ್ತು ವೀನಸ್ ವಿಲಿಯಮ್ಸ್ ಕೂಡ  ಜಯದೊಡನೆ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

SCROLL FOR NEXT