ಕ್ರೀಡೆ

ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಪ್ರಶಸ್ತಿ: ರಾಂಕಿರೆಡ್ಡಿ-ಚಿರಾಗ್ ಜೋಡಿ, ಪ್ಯಾರಾ ಶೆಟ್ಲರ್ ಪ್ರಮೋದ್ ನಾಮನಿರ್ದೇಶನ 

Raghavendra Adiga

ನವದೆಹಲಿ: ಭಾರತೀಯ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರನ್ನು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯುಎಫ್) 'ವರ್ಷದ ಅತ್ಯಂತ ಸುಧಾರಿತ ಆಟಗಾರ' (Most Improved Player of the Year) ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ,

ಈ ವರ್ಷದ ಫ್ರೆಂಚ್ ಓಪನ್ ಸೂಪರ್ 750 ಈವೆಂಟ್‌ನ ಫೈನಲ್‌ಗೆ ತಲುಪಿದ್ದ ಈ ಜೋಡಿ ಥಾಯ್ ಲ್ಯಾಂಡ್  ಓಪನ್‌ನಲ್ಲಿ ತನ್ನ ಮೊದಲ ಸೂಪರ್ 500 ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಇದಲ್ಲದೆ ಈ ವರ್ಷ 11 ಚಿನ್ನ, ಮೂರು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ಗಳಿಸಿರುವ ಭಾರತದ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಪ್ರಮೋದ್ ಭಗತ್ ಅವರನ್ನು 'ವರ್ಷದ ಪುರುಷ ಪ್ಯಾರಾ-ಬ್ಯಾಡ್ಮಿಂಟನ್ ಆಟಗಾರ' (Male Para-Badminton Player of the Year) ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

ಡಿಸೆಂಬರ್ 11 ರಿಂದ 15 ರವರೆಗೆ ನಡೆಯಲಿರುವ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್‌ನ ಎರಡನೇ ಆವೃತ್ತಿಯ ಉದ್ಘಾಟನಾ ಸಮಾರಂಭ ಮತ್ತು ಗಾಲಾ ಡಿನ್ನರ್‌ನಲ್ಲಿ ಚೀನಾದ ಗೌಂಗ್ಮೌನಲ್ಲಿ ಡಿಸೆಂಬರ್ 9ರಂದು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

SCROLL FOR NEXT