ಕ್ರೀಡೆ

ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಆಗ್ರಹಿಸಿ ಗೃಹ ಸಚಿವ ಶಾಗೆ ರಕ್ತದಿಂದ ಪತ್ರ ಬರೆದ ಅಂತಾರಾಷ್ಟ್ರೀಯ ಶೂಟರ್ 

Raghavendra Adiga

ಲಖನೌ: ನಿರ್ಭಯಾ ಅತ್ಯಚಾರ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆೆ ನೀಡುವಂತೆ ಆಗ್ರಹಿಸಿ ಅಂತಾರಾಷ್ಟ್ರೀಯ ಶೂಟರ್ ವರ್ತಿಕಾ ಸಿಂಗ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಬೇಕು. ಆ ಮೂಲಕ ಮಹಿಳೆಯರ ಮೇಲೆ ಇಂಥ ಕೃತ್ಯಗಳನ್ನು ಎಸಗುವವರಿಗೆ ಇದು ಪಾಠವಾಗಬೇಕು ಎಂದ ಅವರು ಇದೇ ವೇಳೆ ಸಿನಿಮಾ ನಟಿಯರು, ಶಾಸಕರು ಹಾಗೂ ಸೆಲೆಬ್ರಿಟಿಗಳನ್ನು ಬೆಂಬಲಿಸಿದರು.

 “ನನ್ನ ಕೈಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಬರೆದ ಪತ್ರವಿದೆ.. ನಾನು ಅದನ್ನು ನನ್ನ ರಕ್ತದಿಂದ ಬರೆದಿದ್ದೇನೆ. ಅಪರಾಧಿಗಳನ್ನು ಗಲ್ಲಿಗೇರಿಸಲು ನನಗೆ ಅವಕಾಶ ನೀಡಬೇಕು ಎಂದು ಬರೆದಿದ್ದೇನೆ. ಇದು ಭಾರತದಲ್ಲಿ ಮಹಿಳೆಯರನ್ನು ದೇವತೆಗಳೆಂದು ನೋಡುವ ಪರಿಕಲ್ಪನೆಯನ್ನು ಬಲಪಡಿಸುತ್ತದೆ.ಅಲ್ಲದೆ ಮಹಿಳೆ  ಅತ್ಯಾಚಾರಿಗಳನ್ನು ಗಲ್ಲಿಗೇರಿಸುವುದು ಬಲವಾದ ಸಂದೇಶವನ್ನು ರವಾನಿಸುತ್ತದೆ ಎಂದು ಸಿಂಗ್ ಹೇಳಿದರು.

“ಈ ಸಂದೇಶವು ಇಡೀ ಜಗತ್ತಿಗೆ ಪ್ರಸಾರವಾಗಬೇಕು. ಭಾರತದಲ್ಲಿ ಒಬ್ಬ ಮಹಿಳೆ ಅತ್ಯಾಚಾರ ಆರೋಪಿಗಳನ್ನು ಮರಣದಂಡನೆಗೆ ದೂಡಬಹುದು ಎಂದು ಅತ್ಯಾಚಾರಿಗಳು ತಿಳಿದಿರಬೇಕು ”ಎಂದು ಸಿಂಗ್ ಹೇಳಿದರು, ಎಲ್ಲಾ ಮಹಿಳಾ ನಟರು, ಸೈನಿಕರು ಮತ್ತು ಸಾರ್ವಜನಿಕ ಪ್ರತಿನಿಧಿಗಳು ತಮ್ಮನ್ನು ಬೆಂಬಲಿಸುವಂತೆ ಒತ್ತಾಯಿಸಿದರು.

ಅಂತರರಾಷ್ಟ್ರೀಯ ಶೂಟರ್" ಎಂದು ಗುರುತಿಸಲ್ಪಟ್ಟ ವರ್ತಿಕಾ ಸಿಂಗ್ ಈ ವರ್ಷದ ಸೆಪ್ಟೆಂಬರ್ ನಲ್ಲಿ ಬಾಬ್ರಿ ಮಸೀದಿ ಪ್ರಕರಣದ ದಾವೆದಾರ ಇಕ್ಬಾಲ್ ಅನ್ಸಾರಿ ಅವರನ್ನು ಬಂಧಿಸಿದ್ದಕ್ಕಾಗಿ ಉತ್ತರ ಪ್ರದೇಶ ಪೊಲೀಸರು ಬುಕ್ ಮಾಡಿದಾಗ ಸುದ್ದಿ ಮಾಡಿದ್ದರು. ಪೊಲೀಸರ ಪ್ರಕಾರ, ಸಿಂಗ್ ಅವರು "ಪ್ರಕರಣವನ್ನು ಚರ್ಚಿಸಲು" ಅನ್ಸಾರಿ ಅವರ ಮನೆಗೆ ಹೋಗಿದ್ದರು ಮತ್ತು ನಂತರ ಆತನ ಮೇಲೆ ಹಲ್ಲೆ ಮಾಡಿದ್ದಾರೆ. 

ಪ್ರಸ್ತುತ ನಾಲ್ವರನ್ನು ಬಂಧಿಸಿರುವ ತಿಹಾರ್ ಜೈಲಿನ ಅಧಿಕಾರಿಗಳು, ಗಲ್ಲಿಗೇರಿಸಲು ಹಗ್ಗಗಳನ್ನು ಸಿದ್ಧಪಡಿಸುವಂತೆ ಬಿಹಾರದ ಬಕ್ಸಾರ್ ಜೈಲಿಗೆ ಸೂಚಿಸಿದ್ದಾರೆ ಮತ್ತು ಉತ್ತರ ಪ್ರದೇಶ ಸರ್ಕಾರವನ್ನು ಗಲ್ಲಿಗೇರಿಸುವವರನ್ನು ಒದಗಿಸುವಂತೆ ಕೇಳಿಕೊಳ್ಳಲಾಗಿದೆ.

SCROLL FOR NEXT