ಕ್ರೀಡೆ

ಕಿಂಗ್ ಆಫ್ ಕ್ಲೇ ನಡಾಲ್​ಗೆ 12ನೇ ಫ್ರೆಂಚ್​​ ಓಪನ್​ ಪ್ರಶಸ್ತಿ, ವೃತ್ತಿಜೀವನದ 18ನೇ ಗ್ರಾಂಡ್​ಸ್ಲಾಮ್​ ಗೆದ್ದು ಸಂಭ್ರಮ

Raghavendra Adiga
ಪ್ಯಾರೀಸ್: "ಕಿಂಗ್ ಆಫ್ ಕ್ಲೇ" ಖ್ಯಾತಿಯ ಸ್ಪೇನ್ ನ ರಫೇಲ್​ ನಡಾಲ್​​ ಅವರು ಫ್ರೆಂಚ್​​ ಓಪನ್​​​ ಟೆನಿಸ್​​ ಟೂರ್ನಿ ಪುರುಷರ ಫೈನಲ್ಸ್ ನಲ್ಲಿ ಚಾಂಪಿಯನ್ ಆಗುವ ಮೂಲಕ 12ನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ ಇದು ಅವರ ವೃತ್ತಿಜೀವನದ ದ 18ನೇ ಗ್ರಾಂಡ್​ಸ್ಲಾಮ್​ ಪ್ರಶಸ್ತಿಯಾಗಿದೆ.
ಭಾನುವಾರ ನಡೆದ ಫೈನಲ್ ಹಣಾಹಣಿಯಲ್ಲಿ ನಡಾಲ್ ತಮ್ಮ ಎದುರಾಳಿ ಡಾಮಿನಿಕ್​​ ಥೀಮ್​​ ಅವರ ವಿರುದ್ಧ -3, 5-7, 6-1, 6-1 ನೇರ ಸೆಟ್ ಗಳಿಂಡ ಜಯ ಗಳಿಸಿದ್ದಾರೆ.
ಟೆನ್ನಿಸ್ ಕ್ಷೇತ್ರದ ಖ್ಯಾತ ಆಟಗಾರರಾದ ಸ್ವಿಜರ್ಲೆಂಡ್ ರೋಜರ್ ಫೆಡರರ್ ಅವರು ಇದುವರೆಗೆ ತಮ್ಮ ವೃತ್ತಿಜೀವನದಲ್ಲಿ ಇಪ್ಪತ್ತು ಗ್ರಾಂಡ್​ಸ್ಲಾಮ್ಪ್ರಶಸ್ತಿ ಗೆಲ್ಲುವ ಮೂಲಕ ದಾಖಲೆಯ ಗ್ರಾಂಡ್​ಸ್ಲಾಮ್ಜಯಿಸಿದ ಕೀರ್ತಿ ಹೊಂದಿದ್ದರೆ ನಡಾಲ್ ಅದನ್ನು ಸರಿಗಟ್ಟಲು ಇನ್ನು ಕೇವಲ ಎರಡು ಪ್ರಶಸ್ತಿಗಳನ್ನು ಜಯಿಸಬೇಕಿದೆ.
ಇನ್ನು ಫ್ರೆಂಚ್ ಓಪನ್ ಸೆಮಿಫೈನಲ್ಸ್ ನಲ್ಲಿ ನಡಾಲ್ ರೋಜರ್ ಫೆಡರರ್ ಅವರನ್ನು ಮಣಿಸಿ ಫೈನಲ್ಸ್ ಹಂತಕ್ಕೇರಿದ್ದರು. ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲಿ 2017, 2018 ಹಾಗೂ 2019 ಹೀಗೆ ಸತತ ಮೂರು ವರ್ಷಗಳಿಂಡ ಪ್ರಶಸ್ತಿ ಜಯಿಸುವ ಮೂಲಕ ನಡಾಲ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
SCROLL FOR NEXT