ಕ್ರೀಡೆ

ಎಟಿಪಿ ಚಾಲೆಂಜರ್: ನಾಲ್ಕರ ಘಟ್ಟಕ್ಕೆ ಸುಮಿತ್ ನಗಾಲ್ ಎಂಟ್ರಿ

Raghavendra Adiga

ನವದೆಹಲಿ:  ಅದ್ಭುತ ಲಯ ಮುಂದುವರಿಸಿರುವ ಭಾರತದ ಉದಯೋನ್ಮುಖ ಟೆನಿಸ್ ಆಟಗಾರ ಸುಮಿತ್ ನಗಾಲ್ ಅವರು ಬ್ರೆೆಜಿಲ್‌ನಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್ ಟೂರ್ನಿಯ ಸೆಮಿಫೈನಲ್‌ಗೆ ಪ್ರವೇಶ ಮಾಡಿದ್ದಾರೆ.

ಶುಕ್ರವಾರ ತಡರಾತ್ರಿ ನಡೆದ ಪುರುಷರ ಸಿಂಗಲ್ಸ್‌ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆರನೇ ಶ್ರೇಯಾಂಕಿತ ನಗಾಲ್ ಅವರು, 13ನೇ ಸ್ಥಾನದ ಫ್ರಾನ್ಸ್‌‌ಸಿಸ್ಕೋ ಸೆರುಂಡೊಲ ವಿರುದ್ಧ 7-6 (2), 7-5 ಅಂತರದಲ್ಲಿ ಗೆದ್ದು ಉಪಾಂತ್ಯಕ್ಕೆೆ ಪ್ರವೇಶ ಮಾಡಿದ್ದಾರೆ.

ವಿಶ್ವ 135ನೇ ಶ್ರೇಯಾಂಕದ ಹರಿಯಾಣದ ಸುಮಿತ್ ನಗಾಲ್ ಅವರು ಆತ್ಮವಿಶ್ವಾಸದೊಂದಿಗೆ ಪಂದ್ಯ ಆರಂಭಿಸಿದರ. 121 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಒಂಬತ್ತು ಬ್ರೇಕ್ ಪಾಯಿಂಟ್‌ಗಳಲ್ಲಿ ಐದನ್ನು ಉಳಿಸಿಕೊಂಡರು. ಎರಡನೇ ಸೆಟ್‌ನಲ್ಲಿ 14 ಬ್ರೇಕ್ ಪಾಯಿಂಟ್‌ಗಳಲಿ ಐದರಲ್ಲಿ ಜಯ ಸಾಧಿಸಿದರು. ಮೊದಲನೇ ಸರ್ವೀಸ್‌ನಲ್ಲಿ ಶೇ.69 ರಷ್ಟು ಯಶ ಸಾಧಿಸಿದರು. ಇದರಲ್ಲಿ ಎರಡು ಏಸ್ ಪಾಯಿಂಟ್‌ಗಳು ಒಳಗೊಂಡಿದ್ದವು. ಜತೆಗೆ, ಆರು ಡಬಲ್ಸ್‌ ಫಾಲ್ಟ್‌ ಮಾಡಿದ್ದರು.

ಫ್ರಾನ್ಸಿಸ್ಕೋ ಅವರು ಮೊದಲನೇ ಸರ್ವೀಸ್‌ನಲ್ಲಿ ಶೇ. 72 ರಷ್ಟು ಯಶಸ್ಸು ಸಾಧಿಸಿದ್ದು, ಮೂರು ಬಾರಿ ಡಬಲ್ಸ್‌ ಫಾಲ್ಟ್‌ ಮಾಡಿ ಒಂದು ಏಸ್ ಅಂಕ ಪಡೆದಿದ್ದರು. 14 ಬ್ರೇಕ್ ಪಾಯಿಂಟ್‌ಗಳಲ್ಲಿ ಒಂಬತ್ತು ಬ್ರೇಕ್ ಪಾಯಿಂಟ್‌ಗಳನ್ನು ಉಳಿಸಿಕೊಂಡಿದ್ದರು. ಜತೆಗೆ, ಒಂಬತ್ತರಲ್ಲಿ ನಾಲ್ಕರಲ್ಲಿ ಬ್ರೇಕ್ ಪಾಯಿಂಟ್ ಗೆದ್ದಿದ್ದರು.

ಸೆಮಿಫೈನಲ್ ಹಣಾಹಣಿಯಲ್ಲಿ ಸುಮಿತ್ ನಗಾಲ್ ಅವರು ಅರ್ಜೆಂಟೀನಾದ ಜ್ಯೂನ್ ಪ್ಯಾಬ್ಲೊ ವಿರುದ್ಧ ಸೆಣಸಲಿದ್ದಾರೆ. ಇವರು ಮತ್ತೊಂದು ಕ್ವಾರ್ಟರ್ ಪೈನಲ್ ಪಂದ್ಯದಲ್ಲಿ ಪೆರುವಿನ ನಿಕೋಸ್ ಅಲ್ವೆೆರೆಜ್ ಅವರ ವಿರುದ್ಧ 6-1, 6-3 ಅಂತರದಲ್ಲಿ ಗೆದ್ದಿದ್ದರು.

SCROLL FOR NEXT