ಕ್ರೀಡೆ

ಕಾಮನ್‍ವೆಲ್ತ್ ರಾಷ್ಟ್ರಗಳಿಗೆ ಕ್ರಿಕೆಟ್ ತರಬೇತಿ ಶಿಬಿರ

Srinivas Rao BV

ನವದೆಹಲಿ: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ವತಿಯಿಂದ 16 ವಯೋಮಿತಿ ಬಾಲಕರಿಗೆ  ಕ್ರಿಕೆಟ್ ತರಬೇತಿ ಶಿಬಿರವನ್ನು ಕಾಮನ್ವೆಲ್ತ್ ರಾಷ್ಟ್ರಗಳ 16 ವಯೋಮಿತಿ ಬಾಲಕರಿಗಾಗಿ ಆಯೋಜಿಸಲಾಗಿದೆ. 

ಕರ್ನಾಟಕ ರಾಜಧಾನಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅ. 1 ರಿಂದಲೇ ಶಿಬಿರ ಆರಂಭವಾಗಿದ್ದು, ಅ. 30 ರಂದು ಅಂತ್ಯವಾಗಲಿದೆ. 16 ಕಾಮನ್‍ವೆಲ್ತ್ ರಾಷ್ಟ್ರಗಳಿಂದ 18 ಬಾಲಕರು ಹಾಗೂ 17 ಬಾಲಕಿಯರು ಸೇರಿ ಒಟ್ಟು 35 ಮಂದಿ ಶಿಬಿರದಲ್ಲಿ ಭಾಗವಹಿಸಿದ್ದಾರೆ. 

2018 ರ ಏಪ್ರಿಲ್‌ನಲ್ಲಿ ಲಂಡನ್‌ನಲ್ಲಿ ನಡೆದ ಕಾಮನ್‌ವೆಲ್ತ್ ಮುಖ್ಯಸ್ಥರ ಸರ್ಕಾರದ ಸಭೆಯಲ್ಲಿ (ಸಿಎಚ್‌ಒಜಿಎಂ) ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಪ್ರಕಟಣೆಗೆ ಅನುಸಾರವಾಗಿ ಈ ರೀತಿಯ ಕೋಚಿಂಗ್ ಕ್ಯಾಂಪ್ ನಡೆಸಲಾಗುತ್ತಿದೆ. ಇದನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಪ್ರಾಯೋಜಿಸುತ್ತಿದೆ.

SCROLL FOR NEXT