ಕ್ರೀಡೆ

ಒಲಿಂಪಿಕ್ಸ್‌ ಟೆಸ್ಟ್‌ ಈವೆಂಟ್: ಶಿವ ಥಾಪ ಸೇರಿ 6 ಭಾರತೀಯ ಬಾಕ್ಸರ್ ಗಳು ಸೆಮಿಫೈನಲ್ ಗೆ

Lingaraj Badiger

ಟೋಕಿಯೊ: ನಾಲ್ಕು ಬಾರಿ ಏಷ್ಯನ್ ಪದಕ ವಿಜೇತ ಶಿವಥಾಪ(63 ಕೆ.ಜಿ) ಅವರು ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ಟೆಸ್ಟ್‌ ಈವೆಂಟ್ ಬಾಕ್ಸಿಂಗ್  ನಲ್ಲಿ ಸೆಮಿಫೈನಲ್ ತಲುಪುವ ಮೂಲಕ ಕಂಚಿನ ಪದಕ ಭದ್ರಪಡಿಸಿಕೊಂಡಡಿದ್ದಾರೆ. ಇವರ ಜತೆ ಭಾರತದ ಇತರೆ ಆರು ಬಾಕ್ಸರ್ ಗಳು ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದು ಪದಕ ಖಚಿತಪಡಿಸಿಕೊಂಡಿದ್ದರೆ.

63 ಕೆ.ಜಿ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಶಿವಥಾಪ ಅವರು ಸ್ಥಳೀಯ ಫೇವರಿಟ್ ಬಾಕ್ಸರ್ ಯೂಕಿ ಹಿರಕಾವ ಅವರ ವಿರುದ್ಧ 5-0 ಅಂತರದಲ್ಲಿ ಗೆದ್ದು ಅಂತಿಮ ನಾಲ್ಕರ ಹಂತಕ್ಕೆ ಪ್ರವೇಶ ಮಾಡಿದ್ದಾರೆ. ಪ್ರಸಕ್ತ ತಿಂಗಳ ಆರಂಭದಲ್ಲಿ ಮೂರನೇ ಬಾರಿ ರಾಷ್ಟ್ರೀಯ ಚಾಂಪಿಯನ್ ಆದ ಅಸ್ಸಾಂನ ಮೊದಲ ಬಾಕ್ಸರ್ ಎಂಬ ಸಾಧನೆಗೆ ಥಾಪ ಭಾಜನರಾಗಿದ್ದರು.

ಬುಧವಾರ ನಡೆಯುವ ಸೆಮಿಫೈನಲ್ ಹಣಾಹಣಿಯಲ್ಲಿ ಜಪಾನ್‌ನ ಡೈಸುಕ್ ನರಿಮಾಟ್ಸು ವಿರುದ್ಧ ಸೆಣಸಲಿದ್ದಾಾರೆ. ಆರಂಭಿಕ ಸುತ್ತಿನಲ್ಲಿ ಡೈಸುಕ್ ಬೈ ಪಡೆದಿದ್ದರು.

ಮಾಜಿ ಕಿರಿಯರ ವಿಶ್ವ ಚಾಂಪಿಯನ್ ನಿಕಾತ್ ಝರೀನ್ 51 ಕೆ.ಜಿ ವಿಭಾಗದಲ್ಲಿ ಫೈಟ್ ಮಾಡದೆ ಬೈ ಪಡೆಯುವ ಮೂಲಕ ಕಂಚಿನ ಪದಕ ಖಚಿತಪಡಿಸಿಕೊಂಡಿದ್ದಾರೆ. ಝರೀನ್ ಜತೆಗೆ ಏಷ್ಯನ್ ಬೆಳ್ಳಿ ಪದಕ ವಿಜೇತ ಸುಮೀತ್ ಸಂಗ್ವನ್ ಅವರು(91 ಕೆ.ಜಿ), ಆಶಿಶ್ (69 ಕೆ.ಜಿ), ವಾನ್ಲಿಮ್ ಪೂಯಾ (75 ಕೆ.ಜಿ), ಸಿಮ್ರಾನ್‌ಜೀತ್ ಕೌರ್ (60 ಕೆ.ಜಿ) ಹಾಗೂ ಪೂಜಾ ರಾಣಿ (75 ಕೆ.ಜಿ) ಅವರು ಸೆಮಿಫೈನಲ್ಸ್‌ ತಲುಪಿದ್ದಾರೆ.

ಪ್ರಸಕ್ತ ತಿಂಗಳಿನ ಆರಂಭದಲ್ಲಿ ಸಂಗ್ವನ್ ಅವರು ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ಇವರು ಅಂತಿಮ ನಾಲ್ಕರ ಘಟ್ಟದಲ್ಲಿ ಕಜಕೀಸ್ತಾನದ ಐಬೆಕ್ ಓರಲ್‌ಬೆ ವಿರುದ್ಧ ಸೆಣಸಲಿದ್ದಾರೆ.

ಆರು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಅವರು ಯಾವುದೇ ಟ್ರಯಲ್ಸ್ ಇಲ್ಲದೆ ಒಲಿಂಪಿಕ್ ಟೆಸ್ಟ್‌ ಈವೆಂಟ್‌ಗೆ ಆಯ್ಕೆ ಮಾಡಲಾಗಿದೆ ಎಂದು ನಖಾತ್ ಝರೀನ್ ಅವರು ಆರೋಪ ಮಾಡಿದ್ದರು. ಇದು ಎಲ್ಲ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ಸುದ್ದಿಯಾಗಿತ್ತು. ಇದೀಗ ಝರೀನ್ ಅವರು ಜಪಾನ್‌ನ ಸನ ಕವಾನೊ ವಿರುದ್ಧ ಸೆಣಸಲಿದ್ದಾರೆ.

ಮಾಜಿ ಏಷ್ಯನ್ ಕಂಚಿನ ಪದಕ ವಿಜೇತೆ ಪೂಜಾ ರಾಣಿ ಅವರು ಉಪಾಂತ್ಯದಲ್ಲಿ ಬ್ರೆಜಿಲ್ ನ ಬೀಟ್ರಿಜ್ ಸೋರ್ಸ್ ವಿರುದ್ಧ ಕಾದಾಟ ನಡೆಸಲಿದ್ದಾರೆ. ಪ್ರಸಕ್ತ ಆವೃತ್ತಿಯ ಆರಂಭದಲ್ಲಿ ರಾಣಿ ಅವರು ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದರು.

ಭಾರತದ ಮತ್ತೊರ್ವ ಬಾಕ್ಸರ್ ಅನಂತ್ ಚೋಪ್ದೆ ಅವರು 2-3 ಅಂತರದಲ್ಲಿ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಸ್ಥಳೀಯ ಬಾಕ್ಸರ್ ತೋಷೊ ಕಶಿವಾಸಕಿ ವಿರುದ್ಧ ಸೋಲು ನನುಭವಿಸಿದ್ದರು.

SCROLL FOR NEXT