ಕ್ರೀಡೆ

ನಾಲ್ಕನೇ ಬಾರಿಗೆ ಅಮೆರಿಕ ಓಪನ್ ಪ್ರಶಸ್ತಿಗೆ ಮುತ್ತಿಟ್ಟ ರಾಫೆಲ್ ನಡಾಲ್

Srinivasamurthy VN

ರಷ್ಯಾದ ಮೆಡ್ವೆಡೆವ್ ರಿಂದ ತೀವ್ರ ಹೋರಾಟ, ಬರೊಬ್ಬರಿ ಐದು ಸೆಟ್ ಗಳ ವರೆಗೂ ಮುಂದುವರೆದ ಮ್ಯಾರಥಾನ್ ಬ್ಯಾಟಲ್

ನ್ಯೂಯಾರ್ಕ್: ತೀವ್ರ ಕುತೂಹಲ ಕೆರಳಿಸಿದ್ದ ಅಮೆರಿಕ ಓಪನ್ ಟೂರ್ನಿಯ ಪೈನಲ್ ನಲ್ಲಿ ಸ್ಪೈನ್ ನ ಟೆನ್ನಿಸ್ ದಂತಕಥೆ ರಾಫೆಲ್ ನಡಾಲ್ ವಿರೋಚಿತ ಜಯ ಸಾಧಿಸಿ ನಾಲ್ಕನೇ ಬಾರಿಗೆ ಯುಎಸ್ ಓಪನ್ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.

ಇಲ್ಲಿನ ಆರ್ಥರ್ ಆಶೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಾಫೆಲ್ ನಡಾಲ್ ರಷ್ಯಾದ ಮೆಡ್ವೆಡೆವ್ ಅವರನ್ನು 7-5, 6-3, 5-7, 4-6, 6-4 ನೇರ ಸೆಟ್ ಗಳ ಅಂತರದಲ್ಲಿ ಮಣಿಸಿದರು. ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದ ನಡಾಲ್ ಗೆ ಮೆಡ್ವೆಡೆವ್ ತೀವ್ರ ಪ್ರತಿರೋಧ ಒಡ್ಡಿದ್ದರು. ಬರೊಬ್ಬರಿ ಐದು ಸೆಟ್ ಗಳ ವರೆಗೂ ನಡೆದ ಮ್ಯಾರಥಾನ್ ಹೋರಾಟದಲ್ಲಿ ನಡಾಲ್ ಅಂತಿಮ ಸೆಟ್ ಅನ್ನು 6-4 ಅಂತರದಲ್ಲಿ ತಮ್ಮದಾಗಿಸಿಕೊಳ್ಳುವದರೊಂದಿಗೆ ನಾಲ್ಕನೇ ಬಾರಿಗೆ ಪ್ರಶಸ್ತಿಗೆ ಮುತ್ತಿಟ್ಟರು.

ನಡಾಲ್ ಗೆ ಇದು 19ನೇ ಗ್ರಾಂಡ್ ಸ್ಲಾಮ್ ಆಗಿದ್ದು, 27ನೇ ಗ್ರ್ಯಾಂಡ್‌ಸ್ಲಾಂ ಫೈನಲ್‌ ಪಂದ್ಯವಾಗಿತ್ತು. 

ಇನ್ನು 20 ಪ್ರಶ​ಸ್ತಿ​ಗ​ಳೊಂದಿಗೆ ಅತಿ​ಹೆಚ್ಚು ಗ್ರ್ಯಾಂಡ್‌ಸ್ಲಾಂ ಗೆದ್ದ ಆಟ​ಗಾ​ರರ ಪಟ್ಟಿ​ಯಲ್ಲಿ ರೋಜರ್‌ ಫೆಡ​ರರ್‌ ಮೊದಲ ಸ್ಥಾನ​ದ​ಲ್ಲಿದ್ದು, ನಡಾಲ್‌ 2ನೇ ಸ್ಥಾನ​ದ​ಲ್ಲಿ​ದ್ದಾರೆ. ಯುಎಸ್‌ ಓಪನ್‌ ಗೆದ್ದರೆ ನಡಾಲ್‌, ಫೆಡ​ರರ್‌ ಸಮೀ​ಪ​ಕ್ಕೆ ಬಂದಿದ್ದಾರೆ.

SCROLL FOR NEXT