ಕ್ರೀಡೆ

ಯೋಗಾಸನ ಸ್ಪರ್ಧಾತ್ಮಕ ಕ್ರೀಡೆ: ಕೇಂದ್ರ ಕ್ರೀಡಾ ಸಚಿವಾಲಯ ಅಧಿಕೃತ ಘೋಷಣೆ

ಕೇಂದ್ರ ಸರ್ಕಾರ ಯೋಗಾಸನವನ್ನು ಸ್ಪರ್ಧಾತ್ಮಕ ಕ್ರೀಡೆಯೆಂದು ಇಂದು ಔಪಚಾರಿಕವಾಗಿ ಘೋಷಿಸಿದೆ. ಇದು ಪ್ರಾಚೀನ ಯೋಗಾಭ್ಯಾಸದ ಕ್ಷೇತ್ರದಲ್ಲಿ ಸರ್ಕಾರದ ಹಣ ವಿನಿಯೋಗಕ್ಕೆ ಮಾರ್ಗ ಒದಗಿಸಲಿದೆ.

ನವದೆಹಲಿ: ಕೇಂದ್ರ ಸರ್ಕಾರ ಯೋಗಾಸನವನ್ನು ಸ್ಪರ್ಧಾತ್ಮಕ ಕ್ರೀಡೆಯೆಂದು ಔಪಚಾರಿಕವಾಗಿ ಘೋಷಿಸಿದೆ. ಇದು ಪ್ರಾಚೀನ ಯೋಗಾಭ್ಯಾಸದ ಕ್ಷೇತ್ರದಲ್ಲಿ ಸರ್ಕಾರದ ಹಣ ವಿನಿಯೋಗಕ್ಕೆ ಮಾರ್ಗ ಒದಗಿಸಲಿದೆ.

ಕ್ರೀಡಾ ಸಚಿವ ಕಿರಣ್ ರಿಜಿಜು ಮತ್ತು ಆಯುಷ್ ಆಯುಷ್ ಸಚಿವ ಶ್ರೀಪಾದ ಯೆಸ್ಸೊ ನಾಯಕ್  ಅವರು ಕಾರ್ಯಕ್ರಮವೊಂದರಲ್ಲಿ ಯೋಗಾಸನವನ್ನು ಸ್ಪರ್ಧಾತ್ಮಕ ಕ್ರೀಡೆ ಎಂದು ಔಪಚಾರಿಕವಾಗಿ ಘೋಷಿಸಿದ್ದಾರೆ. ಯೋಗವನ್ನು ಉತ್ತೇಜಿಸಲು, ಅದರ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜನರ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಸುಧಾರಿಸಲು ಈ ಕ್ರಮಕ್ಕೆ ಮುಂಡಾಗಿರುವುದಾಗಿ ಅವರು ಹೇಳಿದ್ದಾರೆ.

“ಯೋಗಾಸನ ದೀರ್ಘಕಾಲದಿಂದ ಸ್ಪರ್ಧಾತ್ಮಕ ಕ್ರೀಡೆಯಾಗಿದೆ. ಆದರೆ ಇದನ್ನು ಅಧಿಕೃತ ಮತ್ತು ಮಾನ್ಯತೆ ಪಡೆದ ಸ್ಪರ್ಧಾತ್ಮಕ ಕ್ರೀಡೆ ಎಂದು ಭಾರತ ಸರ್ಕಾರ ಇದುವರೆಗೆ ಮಾನ್ಯತೆ ನೀಡಿರಲಿಲ್ಲ. ಇಂದು ಒಂದು ಮಹತ್ವದ ದಿನ ನಾವು ಇದನ್ನು ಸ್ಪರ್ಧಾತ್ಮಕ ಕ್ರೀಡೆಯಾಗಿ ಔಪಚಾರಿಕವಾಗಿ ಪ್ರಾರಂಭಿಸುತ್ತಿದ್ದೇವೆ ಮತ್ತು ಅದು ಬಹಳ ದೂರದವರೆಗೆ ಪ್ರಭಾವ ಬೀರಲಿದೆ ಎಂದು ನನಗೆ ಖಾತ್ರಿಯಿದೆ" ಎಂದು ಅವರು ಹೇಳಿದರು.

ಯೋಗ ಗುರು ಬಾಬಾ ರಾಮದೇವ್ ಅವರ ಅಧ್ಯಕ್ಷತೆಯಲ್ಲಿ ಅಂತರರಾಷ್ಟ್ರೀಯ ಯೋಗಾಸನ ಕ್ರೀಡಾ ಒಕ್ಕೂಟವನ್ನು ಕಳೆದ ನವೆಂಬರ್ ನಲ್ಲಿ ರಚಿಸಲಾಯಿತು.  ಇದಕ್ಕೆ ಡಿಆರ್ ಎಚ್‌ಆರ್ ನಾಗೇಂದ್ರ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. ಇದಲ್ಲದೆ ಸ್ಪರ್ಧಾತ್ಮಕ ಕ್ರೀಡೆಯಾಗಿ ಯೋಗದ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ರಾಷ್ಟ್ರೀಯ ಯೋಗಾಸನ ಸ್ಪೋರ್ಟ್ ಫೆಡರೇಶನ್ ಆಫ್ ಇಂಡಿಯಾ (ಎನ್ವೈಎಸ್ಎಫ್ಐ) ಅನ್ನು ಸ್ಥಾಪಿಸಲಾಗಿದ್ದು ಇದನ್ನು ಕಳೆದ ತಿಂಗಳು ಕೇಂದ್ರವು ರಾಷ್ಟ್ರೀಯ ಕ್ರೀಡಾ ಒಕ್ಕೂಟ (ಎನ್‌ಎಸ್‌ಎಫ್) ಎಂದು ಗುರುತಿಸಿತ್ತು.

ಎನ್‌ವೈಎಸ್‌ಎಫ್‌ಐಗೆ ಹಣಕಾಸಿನ ನೆರವು ನೀಡುವ ಮೂಲಕ ಕೇಂದ್ರವು ಯೋಗಾಸನಕ್ಕೆ ಉತ್ತೇಜ ನೀಡಲು ಮೊದಲು ಮಾಡಿದೆ ಎಂದು ರಿಜಿಜು ಹೇಳಿದರು, "ಇದುವರೆಗೂ ಅದನ್ನು ಸ್ಪರ್ಧಾತ್ಮಕ ಕ್ಷೇತ್ರವೆಂದು ಪರಿಗಣಿಸಿರಲಿಲ್ಲ ಆದರೆ ಈಗ ಅದು ನಮ್ಮ ಅಡಿಯಲ್ಲಿ ಬಂದಿದೆ, ಕ್ರೀಡಾ ಸಚಿವಾಲಯವು ಎನ್‌ವೈಎಸ್‌ಎಫ್‌ಐಗೆ ತಮ್ಮ ವಾರ್ಷಿಕ ತರಬೇತಿ ಮತ್ತು ಯೋಜನೆಗಾಗಿ ಹಣಕಾಸಿನ ನೆರವು ನೀಡುವ ಮೂಲಕ ಇದು ಪ್ರಾರಂಬವಾಗಿತ್ತಿದೆ.ಮುಂದಿನ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಯೋಗಾಸನವನ್ನು ಸೇರಿಸಲಾಗುವುದು" ಎಂದು ಕ್ರೀಡಾ ಸಚಿವರು ಹೇಳಿದರು.

"ಯೋಗವನ್ನು ಸ್ಪರ್ಧಾತ್ಮಕ ಕ್ರೀಡೆಯನ್ನಾಗಿ ಮಾಡುವ ಹಿಂದಿನ ಕಾರಣವೆಂದರೆ ಅದರ ಅಭ್ಯಾಸವನ್ನು ಪ್ರೋತ್ಸಾಹಿಸುವುದು ಮತ್ತು ಜನರ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಸುಧಾರಿಸಲು ಸಹಾಯ ಮಾಡುವುದು" ಎಂದು ನಾಯಕ್ ಹೇಳಿದರು. 

"ಒಲಿಂಪಿಕ್ಸ್ ಮುಂತಾದ ಅಂತರರಾಷ್ಟ್ರೀಯ ಕಾರ್ಯಕ್ರಮದ ಭಾಗವಾಗಿ ಯೋಗಾಸನವನ್ನು ಸೇರ್ಪಡಿಸುವುದುಭಾರತೀಯ ಯೋಗದ ಅರಿವು ಮತ್ತು ಅದರ ಅಸಂಖ್ಯಾತ ಆರೋಗ್ಯ ಪ್ರಯೋಜನಗಳನ್ನು ಪ್ರಸಾರ ಮಾಡಲು ಒಂದು ಅವಕಾಶವನ್ನು ಒದಗಿಸುತ್ತದೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಪಕ್ಷದ ಮೇಲೆ ನನಗೆ ನಂಬಿಕೆ ಇದೆ: ದುಡ್ಡು- ಬ್ಲಡ್ ನಿರಂತರ ಚಲನೆಯಲ್ಲಿ ಇರಬೇಕು; ಅಕ್ಕಪಕ್ಕದಲ್ಲಿ ಇರುವವರೇ ಮೋಸ ಮಾಡುತ್ತಾರೆ, ಎಚ್ಚರ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT